ಶಿವಮೊಗ್ಗ ಲೈವ್
ಶಿವಮೊಗ್ಗ: ಮನೆಯೊಂದರ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು, ಬಂಗಾರದ ಉಂಗುರ ಹಾಗೂ ಬಟ್ಟೆಗಳನ್ನು ದೋಚಿ ಪರಾರಿಯಾಗಿದ್ದಾರೆ. ತೀರ್ಥಹಳ್ಳಿ ರಸ್ತೆಯ ಹಳೆ ಹೊನ್ನಾಪುರದ ರೇವಣ ಸಿದ್ಧಪ್ಪ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ.
ಹಳೆ ಹೊನ್ನಾಪುರದ ಮನೆಗೆ ಬೀಗ ಹಾಕಿ ರೇವಣ ಸಿದ್ಧಪ್ಪ ಅವರು ವೀರಾಪುರದ ಮನೆಗೆ ತೆರಳಿದ್ದರು. ಮರುದಿನ ಬಂದು ನೋಡಿದಾಗ, ಮನೆಯ ಬಾಗಿಲು ಮೀಟಿರುವುದು ಗೊತ್ತಾಗಿದೆ. ಮನೆಯ ರೂಂನ ಬೀರುವಿನಲ್ಲಿದ್ದ ₹30,000 ಮೌಲ್ಯದ 2.9 ಗ್ರಾಂ ತೂಕದ ಬಂಗಾರದ ಉಂಗುರ ಹಾಗೂ ₹10,000 ಮೌಲ್ಯದ 5 ಜೋಡಿ ಪ್ಯಾಂಟ್-ಶರ್ಟ್‌ಗಳು ನಾಪತ್ತೆ ಆಗಿದ್ದವು. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
