SHIMOGA, 26 JULY 2024 : ಕಿರುತೆರೆ ನಟಿ ಶ್ವೇತಾ ಪ್ರಸಾದ್ ನೇತೃತ್ವದಲ್ಲಿ ಕಾಡು ಸಸಿ ನೆಡಲಾಯಿತು. ಆ ಸುದ್ದಿಯ ಸಂಪೂರ್ಣ ವಿವರ ಇಲ್ಲಿದೆ.
ಸೂಡೂರು
ಕಿರುತೆರೆ ನಟಿ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ
ಶಿವಮೊಗ್ಗ ಲೈವ್.ಕಾಂ : ಶಿವಮೊಗ್ಗ ತಾಲೂಕು ಸೂಡೂರು ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಕಿರುತೆರೆ ನಟಿ ಶ್ವೇತಾ ಪ್ರಸಾದ್ ನೇತೃತ್ವದಲ್ಲಿ ವಿವಿಧ ಸಸಿ (Sapling) ನಡೆಲಾಯಿತು. ಪ್ರಸಾದ್ ಫೌಂಡೇಷನ್ ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ಫೌಂಡೇಷನ್ ಸ್ವಯಂ ಸೇವಕರು, ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿ ಸಸಿಗಳನ್ನು ನೆಟ್ಟರು. ಬಳಿಕ ಮಾತನಾಡಿದ ನಟಿ ಶ್ವೇತಾ ಪ್ರಸಾದ್, ‘ಅರಣ್ಯದಲ್ಲಿ ಕಾಡು ಪ್ರಾಣಿಗಳ ಅನುಕೂಲಕ್ಕೆ ಹಲಸು, ಮಾವು, ನೇರಳೆ ಹಣ್ಣಿನ ಸಸಿಗಳನ್ನು ತಂದ್ದಿದ್ದೆವು. ಅರಣ್ಯ ಇಲಾಖೆಯವರು ಸೂಚಿಸಿದ ಸ್ಥಳದಲ್ಲಿ ಸಸಿಗಳನ್ನು ನೆಟ್ಟಿದ್ದೇವೆʼ ಎಂದು ತಿಳಿಸಿದರು.
![]() |
ಕೋಹಳ್ಳಿ
ಸಂತೆ ಮೈದಾನದಲ್ಲಿ ಮೊಬೈಲ್ ಕಳ್ಳತನ
ಶಿವಮೊಗ್ಗ ಲೈವ್.ಕಾಂ : ತರಕಾರಿ ತರಲು ಸಂತೆ ಮೈದಾನಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಕಳುವಾಗಿದೆ. ಶಿವಮೊಗ್ಗ ತಾಲೂಕು ಕೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆ ಮೈದಾನದಲ್ಲಿ ಘಟನೆ ಸಂಭವಿಸಿದೆ. ಆಯನೂರು ಕೋಹಳ್ಳಿಯ ಮಲ್ಲೇಶ್ ತಮ್ಮ ಶರ್ಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡಿದ್ದರು. ಅವರಿಗೆ ಗೊತ್ತಾಗದ ಹಾಗೆ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯನೂರು
ಆಸ್ಪತ್ರೆ ಎದುರು ಬಾಲಕನಿಗೆ ಬೈಕ್ ಡಿಕ್ಕಿ
ಶಿವಮೊಗ್ಗ ಲೈವ್.ಕಾಂ : ಆಯನೂರು ಆಸ್ಪತ್ರೆ ಎದುರು ರಸ್ತೆ ದಾಟುತ್ತಿದ್ದ ಸಂದರ್ಭ ಬಾಲಕನಿಗೆ ಬೈಕ್ ಡಿಕ್ಕಿಯಾಗಿ ಬಲಗಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಮೊಹಮ್ಮದ್ ಅಲಿ (4) ಗಾಯಗೊಂಡಿದ್ದಾನೆ. ತನ್ನ ಅಜ್ಜಿಯೊಂದಿಗೆ ಆಯನೂರು ಆಸ್ಪತ್ರೆಗೆ ಹೋಗಲು ಶಿವಮೊಗ್ಗ – ಸಾಗರ ರಸ್ತೆ ದಾಟುತ್ತಿದ್ದಾಗ ಘಟನೆ ಸಂಭವಿಸಿದೆ. ಸಾಗರ ಕಡೆಯಿಂದ ವೇಗವಾಗಿ ಬಂದ ಬೈಕ್ ಮೊಹಮ್ಮದ್ ಅಲಿಗೆ ಡಿಕ್ಕಿ ಹಡೆದಿದೆ. ಬಾಲಕನಿಗೆ ಆಯನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇓
ತೀರ್ಥಹಳ್ಳಿಯಲ್ಲಿ ಅತಿ ಹೆಚ್ಚು, ಶಿವಮೊಗ್ಗ, ಭದ್ರಾವತಿಯಲ್ಲಿ ಕಡಿಮೆ ಮಳೆ, ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200