ಶಿವಮೊಗ್ಗ: ತಾವರೆಚಟ್ನಹಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರದ 66 ಕೆವಿ ಕೇಂದ್ರದ ಅಬ್ಬಲಗೆರೆ, ಬೆಳಲಕಟ್ಟೆ, ಗೋಂಧಿಚಟ್ನಹಳ್ಳಿ ಮತ್ತು ಹುಣಸೋಡು ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಶಿವಮೊಗ್ಗ ತಾಲೂಕಿನ ಹಲವು ಕಡೆ ಆಗಸ್ಟ್ 30ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಎಲ್ಲೆಲ್ಲಿ ಕರೆಂಟ್ ಇರಲ್ಲ?
ಅಬ್ಬಲಗೆರೆ, ಕೊಮ್ಮನಾಳು, ಬನ್ನಿಕೆರೆ, ಬೀರನಕೆರೆ, ಬಿಕ್ಕೋನಹಳ್ಳಿ, ಕುಂಚೇನಹಳ್ಳಿ ಮೇಲಿನ/ಕೆಳಗಿನ ತಾಂಡ, ಕಲ್ಲಾಪುರ, ಗೋಂದಿಚಟ್ನಹಳ್ಳಿ, ಮೇಲಿನಹನಸವಾಡಿ, ಹೊಳೆಹನಸವಾಡಿ, ಬೆಳಲಕಟ್ಟೆ, ಕಲ್ಲಗಂಗೂರು, ಹುಣಸೋಡು, ಮೋಜಪ್ಪಹೊಸೂರು, ಬಸವನಗಂಗೂರು, ಮತ್ತೋಡು ಹಾಗೂ ಸುತ್ತುಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ » ಶಿವಮೊಗ್ಗ ಸಿಟಿ, ಆಯನೂರು, ಹಾರನಹಳ್ಳಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ, ಯಾವ್ಯಾವ ದಿನ ಎಲ್ಲೆಲ್ಲಿ ಡ್ರೈ ಡೇ?
Power Cut in Shimoga Taluk
