SHIMOGA NEWS, 20 OCTOBER 2024 : ಕಳೆದ ರಾತ್ರಿಯಿಂದ ಸುರಿದ ಭಾರಿ ಮಳೆಗೆ (Rain) ಲಕ್ಕಿನಕೊಪ್ಪದಲ್ಲಿ ಕೆರೆ ಕೋಡಿ ಬಿದ್ದಿದೆ. ಸುತ್ತಮುತ್ತಲು ವಿವಿಧೆಡೆ ಜಮೀನು, ತೋಟ ಜಲಾವೃತವಾಗಿವೆ. ಮಳೆ ಕಡಿಮೆ ಆಗದೆ ಇದ್ದಿದ್ದರೆ ಶಿವಮೊಗ್ಗ – ಎನ್.ಆರ್.ಪುರ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕವಿತ್ತು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಸೇತುವೆ ಮೇಲೆ ಎರಡು ಅಡಿ ನೀರು
ರಾತ್ರಿ ಇಡೀ ಸುರಿದ ಮಳೆಗೆ ಲಕ್ಕಿನಕೊಪ್ಪದ ಹೊಸಕೆರೆಗೆ ಕಾಡಿನಿಂದ ಭಾರಿ ನೀರು ಹರಿದು ಬಂದಿದೆ. ಸಮೀಪದಲ್ಲೇ ಇರುವ ಹೆದ್ದಾರಿ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ಹರಿದಿದೆ. ಅಲ್ಲದೆ ರಸ್ತೆ ಪಕ್ಕದಲ್ಲಿ ಮಣ್ಣು ಕೊಚ್ಚಿ ಹೋಗಿದೆ. ಇನ್ನು, ಅಕ್ಕಪಕ್ಕದ ಜಮೀನು, ತೋಟಕ್ಕೆ ನೀರು ನುಗ್ಗಿದೆ. ರೈತರಲ್ಲಿ ಬೆಳೆ ಹಾನಿ ಭೀತಿ ಎದುರಾಗಿದೆ. ಇಲ್ಲಿನ ಹಳ್ಳದಲ್ಲಿ ನೀರು ರಭಸವಾಗಿ ಹರಿದಿದ್ದು, ರಸ್ತೆ ಪಕ್ಕದಲ್ಲಿ ಮಣ್ಣು ಕೊಚ್ಚಿ ಹೋಗಿದೆ.

ಇದನ್ನೂ ಓದಿ » ಕೋಳಿ ಫಾರಂಗೆ ನುಗ್ಗಿದ ಕೆರೆ ನೀರು, ಸಾವಿರಾರು ಮರಿಗಳು ಸಾವು
ಲಕ್ಕಿನಕೊಪ್ಪದ ಕೆರೆ ಕೋಡಿ ಬಿದ್ದು ಹಾನಿ ಉಂಟಾಗಿದೆ. ಗಾರೆ ಚಾನಲ್ ತುಂಬಿ ಹರಿದು ಭಾರಿ ಪ್ರಮಾಣ ನೀರು ಹರಿದಿದೆ. ಕಾಚಿನಕಟ್ಟೆ ಮತ್ತು ಸುತ್ತಮುತ್ತಲು ಸುಮಾರು 50 ಎಕರೆಯಷ್ಟು ಜಮೀನಿಗೆ ನೀರು ನುಗ್ಗಿದೆ.

ಇದನ್ನೂ ಓದಿ » ಶಿವಮೊಗ್ಗದ ಮಳೆ ಹಾನಿ ಪ್ರದೇಶಗಳಲ್ಲಿ ತಹಶೀಲ್ದಾರ್ ರೌಂಡ್ಸ್
ಕಳೆದ ರಾತ್ರಿಯಿಂದ ಈ ಭಾಗದಲ್ಲಿ ನಿರಂತರವಾಗಿ ಜೋರು ಮಳೆಯಾಗಿದೆ. ಇವತ್ತು ಬೆಳಗ್ಗೆಯು ಮಳೆ ಮುಂದುವರೆದಿತ್ತು. ಈಗ ಮಳೆ ಬಿಡುವು ನೀಡಿದೆ. ಮೋಡ ಕವಿದ ವಾತಾವರಣವಿದ್ದು ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ.



ಇದನ್ನೂ ಓದಿ » ಭಾರಿ ಮಳೆ, ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ಏನೇನಾಗಿದೆ?
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





