ಬಿಕ್ಕೋನಹಳ್ಳಿ ಬಳಿ ಅವಘಡ; ಪ್ರಾಣಾಪಾಯದಿಂದ ಪಾರಾದ ಕುಂಚೇನಹಳ್ಳಿ ದಂಪತಿ, ಆಗಿದ್ದೇನು?

ಶಿವಮೊಗ್ಗ: ಸವಳಂಗ ರಸ್ತೆಯ ಬಿಕ್ಕೋನಹಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ (Road accident) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲೂಕಿನ ಮೇಲಿನ ಕುಂಚೇನಹಳ್ಳಿ ಗ್ರಾಮದ ನಿವಾಸಿ ಸುಮಾ ಬಾಯಿ (38) ಮತ್ತು ಅವರ ಪತಿ ಹೇಮ್ಲಾ ನಾಯ್ಕ್ ಗಾಯಗೊಂಡವರು. ದಂಪತಿ ತಮ್ಮ ಬೈಕ್‌ನಲ್ಲಿ ಶಿವಮೊಗ್ಗದ ಗಾಂಧಿ ಬಜಾರ್‌ಗೆ ದಿನಸಿ ತರಲು ತೆರಳುತ್ತಿದ್ದರು. ಸವಳಂಗ ರಸ್ತೆಯ ಬಿಕ್ಕೋನಹಳ್ಳಿ ಪೆಟ್ರೋಲ್ ಬಂಕ್ ದಾಟಿ ಮೋರಿಕಟ್ಟೆ ಬಳಿ ತಲುಪಿದಾಗ ವೇಗವಾಗಿ ಬಂದ ಕಾರು (High-speed vehicle) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ACCIDENT-NEWS-GENERAL-IMAGE.

ಅಪಘಾತದ ರಭಸಕ್ಕೆ ದಂಪತಿ ರಸ್ತೆಗೆ ಬಿದ್ದಿದ್ದಾರೆ. ಸುಮಾ ಬಾಯಿ ಅವರ ಕಾಲು, ಕೈ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು (Severe injuries), ತಕ್ಷಣದ ಚಿಕಿತ್ಸೆ ಅಗತ್ಯವಿದ್ದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೇಮ್ಲಾ ನಾಯ್ಕ್ ಅವರಿಗೂ ಹೊಟ್ಟೆಯ ಭಾಗಕ್ಕೆ ಒಳಹೊಡೆತ ಬಿದ್ದಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ (Government hospital) ದಾಖಲಿಸಿ ವೈದ್ಯಕೀಯ ಚಿಕಿತ್ಸೆ (Medical treatment) ನೀಡಲಾಗುತ್ತಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (Police investigation) ತನಿಖೆ ನಡೆಸುತ್ತಿದ್ದಾರೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 7, 2026 at 7:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 7, 2026