SHIMOGA, 13 AUGUST 2024 : ತುಂಗಭದ್ರ ಜಲಾಶಯದ ಗೇಟ್ (Crust Gate) ಮುರಿದು ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಡ್ಯಾಮ್‌ಗಳ ಸುರಕ್ಷತೆ ಕುರಿತು ಪ್ರಶ್ನೆಗಳು ಮೂಡಿವೆ. ಈ ಮಧ್ಯೆ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯದ 8ನೇ ಗೇಟ್‌ನ ರೋಪ್ ತುಂಡಾಗುವ ಹಂತದಲ್ಲಿದೆ. ಇದರ ಫೋಟೊಗಳು ಶಿವಮೊಗ್ಗ ಲೈವ್.ಕಾಂಗೆ ಲಭ್ಯವಾಗಿದೆ.
ಗಾಜನೂರಿನ ತುಂಗಾ ಜಲಾಶಯ ಮೂರುವರೆ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸರಿಯಾದ ಒಂದೆರಡು ಮಳೆಗೆ ಜಲಾಶಯ ಭರ್ತಿಯಾಗಲಿದೆ. ರಾಜ್ಯದಲ್ಲಿ ಮೊದಲು ಭರ್ತಿಯಾಗುವ ಡ್ಯಾಂ ಎಂಬ ಖ್ಯಾತಿಯು ಇದಕ್ಕಿದೆ. ತುಂಗಾ ಜಲಾಶಯವು ಒಟ್ಟು 22 ಗೇಟುಗಳನ್ನು ಹೊಂದಿದೆ. ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಗೆ ಪ್ರಮುಖ ಆಸರೆ ಇದು. ಸಾವಿರಾರು ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಏತ ನೀರಾವರಿ ಮೂಲಕ ಹಲವು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ.
8ನೇ ಗೇಟ್ ಓಪನ್ ಮಾಡಿಲ್ಲ
ಈ ಬಾರಿ ಜುಲೈ ತಿಂಗಳಲ್ಲಿ ತುಂಗಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿತ್ತು. ಒಂದೇ ದಿನ 85 ಸಾವಿರ ಕ್ಯೂಸೆಕ್‌ವರೆಗೆ ನೀರನ್ನು ಹೊರ ಬಿಡಲಾಗಿತ್ತು. ಮಳೆಗಾಲದಲ್ಲಿ 22 ಗೇಟುಗಳ ಪೈಕಿ 21 ಗೇಟುಗಳಿಂದ ಮಾತ್ರ ನೀರು ಮೇಲೆತ್ತಲಾಗಿತ್ತು. 8ನೇ ನಂಬರ್ ಗೇಟ್ ಓಪನ್ ಮಾಡದಂತೆ ಇಂಜಿನಿಯರ್‌ಗಳು ನಿರ್ಧರಿಸಿದ್ದರು.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಅಗ್ನಿವೀರರ ನೇಮಕಾತಿ ರ‍್ಯಾಲಿ, ಯಾವೆಲ್ಲ ಜಿಲ್ಲೆಯವರಿಗೆ ಇರಲಿದೆ ಅವಕಾಶ?
ತುಂಡಾಗುವ ಹಂತಕ್ಕೆ ರೋಪ್
ಗಾಜನೂರಿನ ತುಂಗಾ ಜಲಾಶಯದ ಗೇಟ್‌ಗಳನ್ನು ಮೇಲೆತ್ತಲು ರೋಪ್‌ಗಳು ಬಳಸಲಾಗುತ್ತದೆ. ಗೇಟ್‌ಗಳಿಗೆ ಇವುಗಳನ್ನು ಫಿಕ್ಸ್ ಮಾಡಲಾಗಿರುತ್ತದೆ. 8ನೇ ಗೇಟ್‌ನ ರೋಪ್ ತುಂಡಾಗುವಂತಿದೆ. ಮಳೆಗಾಲಕ್ಕು ಮೊದಲು ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಗೇಟ್ ಮೇಲೆತ್ತದಂತೆ ನಿರ್ಧರಿಸಿದ್ದರು. ಮಳೆಗಾಲ ಮುಗಿದ ಬಳಿಕ ಇದರ ದುರಸ್ಥಿ ಕಾರ್ಯ ನಡೆಸಲು ಯೋಜಿಸಲಾಗಿದೆ. ತುಂಗಭದ್ರ ಜಲಾಶಯದ ಗೇಟ್ ಮುರಿದು ಕೊಚ್ಚಿಕೊಂಡು ಹೋದ ಘಟನೆ ಬೆನ್ನಿಗೆ ಈ ವಿಚಾರ ಬಹಿರಂಗವಾಗಿದೆ.
ಇದನ್ನೂ ಓದಿ ⇒ ಪುರದಾಳು ರಸ್ತೆಯಲ್ಲಿ ಅಪಘಾತ, ಮಹಿಳೆಯ ಎರಡು ಕಾಲಿನ ಮೂಳೆ ಕಟ್ – ಇಲ್ಲಿದೆ 3 ಫಟಾಫಟ್ ನ್ಯೂಸ್
ಡ್ಯಾಮ್‌ಗೆ ಅಧಿಕಾರಿಗಳು ದೌಡು
8ನೇ ಗೇಟ್‌ನ ರೋಪ್ ತುಂಡಾಗುವ ಹಂತದಲ್ಲಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಬೆನ್ನಿಗೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಡ್ಯಾಮ್ ದೌಡಾಯಿಸಿದರು. ರೋಪ್ ತುಂಡಾಗಿರುವ ಕುರಿತು ಪರಿಶೀಲನೆ ನಡೆಸಿದರು. ಜಲಾಶಯದ ಇಂಜಿನಿಯರ್‌ಗಳಿಂದ ಮಾಹಿತಿ ಪಡೆದರು.
ಭದ್ರಾದಲ್ಲು ಆತಂಕ ಉಂಟಾಗಿತ್ತು
ಮಳೆಗಾಲದ ಆರಂಭದಲ್ಲೇ ಭದ್ರಾ ಜಲಾಶಯದ ಸ್ಲೂಯಸ್ ಗೇಟ್‌ಗಳಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ನಿರ್ವಹಣೆಗೆ ಮೇಲೆತ್ತಿದ್ದ ಗೇಟ್ ಕೆಳಗಿಳಿಯದೆ ಭಾರಿ ಪ್ರಮಾಣದ ನೀರು ಹರಿದು ಹೋಗಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಹಗಲು ರಾತ್ರಿ ಕಾಮಗಾರಿ ನಡೆಸಿ ಸ್ಲೂಯಸ್ ಗೇಟ್ ಬಂದ್ ಮಾಡಲಾಗಿತ್ತು.
ಇದನ್ನೂ ಓದಿ ⇒ ಸಕ್ರೆಬೈಲಿನ ಸಲಗಕ್ಕೆ ಆನೆ ದಿನದಂದು ನಾಮಕರಣ, ಏನಂತ ಹೆಸರಿಡಲಾಯ್ತು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200