SHIVAMOGGA LIVE NEWS | 10 FEBRURARY 2023
SHIMOGA : ಚೋರಡಿಯಲ್ಲಿ ಸರಣಿ ಅಪಘಾತ (Serial Accident) ಸಂಭವಿಸಿದೆ. ನಾಲ್ಕು ವಾಹನಗಳ ನಡುವೆ ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಹಾನಿಯಾಗಿಲ್ಲ.
ಖಾಸಗಿ ಬಸ್, ಗೂಡ್ಸ್ ವಾಹನ, ಲಾರಿ ಮತ್ತು ಕಾರಿನ ನಡುವೆ ಸರಣಿ ಅಪಘಾತ (Serial Accident) ಸಂಭವಿಸಿದೆ. ವಾಹನಗಳಿಗೆ ಹಾನಿ ಉಂಟಾಗಿದೆ. ಆದರೆ ಯಾವುದೆ ವಾಹನದಲ್ಲಿರುವವರಿಗು ಸಮಸ್ಯೆಯಾಗಿಲ್ಲ. ಅದೃಷ್ಟವಶಾತ್ ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹೇಗಾಯ್ತು ಆಪಘಾತ?
ಸಾಗರ ಕಡೆಯಿಂದ ಬಂದ ಖಾಸಗಿ ಬಸ್, ಚೋರಡಿ ಗ್ರಾಮದಲ್ಲಿ ಪ್ರಯಾಣಿಕರು ಇಳಿಯಲು ನಿಲ್ಲಿಸಲಾಗಿತ್ತು. ಈ ವೇಳೆ ಹಿಂಬದಿಯಿಂದ ಗೂಡ್ಸ್ ಆಟೋ ಬಂದಿದೆ. ಅದರ ಹಿಂದೆ ಬಂದ ಕೆಂಪು ಇಟ್ಟಿಗೆ ತುಂಬಿದ್ದ ಲಾರಿ ಚಾಲಕ ಗೂಡ್ಸ್ ಆಟೋವನ್ನು ಓವರ್ ಟೇಕ್ ಮಾಡಲು ಹೋಗಿ ಹಿಂದಿನಿಂದ ಅಪ್ಪಳಿಸಿದೆ. ನಿಯಂತ್ರಣ ಕಳೆದುಕೊಂಡ ಗೂಡ್ಸ್ ಆಟೋ ಬಸ್ ಗೆ ಅಪ್ಪಳಿಸಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿ ಕೂಗಿಕೊಂಡಿದ್ದಾರೆ. ಇದೇ ಸಮಯದಲ್ಲಿ ಸಾಗರ ಕಡೆಗೆ ತೆರಳುತ್ತಿದ್ದ ಕಾರ್ ಗೆ ಲಾರಿ ತಗುಲಿದೆ.
ಇದನ್ನೂ ಓದಿ – ಹೊಳೆ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿ ಮೃತದೇಹ | ಶಿವಮೊಗ್ಗ ಜಿಲ್ಲೆಯ 4 CRIME NEWS
ಘಟನೆಯಿಂದಾಗಿ ಚೋರಡಿಯಲ್ಲಿ ಅರ್ಧ ಗಂಟೆಗು ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು