ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಇವತ್ತು ತ್ರೈಮಾಸಿಕ ಸಭೆ ಆಯೋಜಿಸಲಾಗಿತ್ತು. ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸಭೆ ಗೈರಾಗಿದ್ದು ಶಾಸಕರ ಸಿಟ್ಟಿಗೆ ಕಾರಣವಾಯಿತು. ಮತ್ತೊಂದೆಡೆ ಪ್ಲಾಸ್ಟಿಕ್ ನಿಷೇಧವಿದ್ದರು ತಾಲೂಕು ಪಂಚಾಯಿತಿ ಸಭೆಯಲ್ಲಿ ಪ್ಲಾಸ್ಟಿಕ್ ವಾಟರ್ ಬಾಟಲ್’ಗಳು ರಾರಾಜಿಸಿದವು.
ಆಫೀಸರ್’ಗಳೇ ಇಲ್ಲದ್ದಕ್ಕೆ ಗರಂ
ತಾಲೂಕು ಪಂಚಾಯಿತಿ ತ್ರೈಮಾಸಿಕ ಸಭೆಗೆ ಹಲವು ಅಧಿಕಾರಿಗಳು ಗೈರಾಗಿದ್ದರು. ಇದು ಶಾಸಕ ಅಶೋಕ್ ನಾಯ್ಕ್ ಅವರನ್ನು ಕೆರಳಿಸಿತು. ತಹಶೀಲ್ದಾರ್ ಗಿರೀಶ್, ಎಪಿಎಂಸಿ, ಕಾರ್ಮಿಕ ಇಲಾಖೆ, ಭೂ ವಿಜ್ಞಾನ ಇಲಾಖೆ, ಕೆಎಸ್ಆರ್’ಟಿಸಿ ಸೇರಿದಂತೆ ಹಲವರು ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಇದ್ದಿದ್ದರಿಂದ ತಹಶೀಲ್ದಾರ್ ಗಿರೀಶ್ ಗೈರಾಗಿದ್ದಾರೆ ಎಂದು ಉಪ ತಹಶೀಲ್ದಾರ್ ತಿಳಿಸಿದರು. ಹಾಗಾಗಿ ಗೈರಾದ ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ಸೂಚಿಸಿದರು.
ಜನಪ್ರತಿನಿಧಿಗಳಿಗೆ ಬಾಟಲಿ ನೀರು
ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆ ಸರ್ಕಾರದ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಸದಂತೆ ಅದೇಶ ಹೊರಡಿಸಲಾಗಿದೆ. ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲ ಸಭೆಗಳಲ್ಲೂ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ನೀಡುವುದು ನಿಷೇಧವಿದೆ. ಅದರೂ ತಾಲೂಕು ಪಂಚಾಯಿತಿ ಸಭೆಯಲ್ಲಿ ಬಾಟಲಿಯಲ್ಲಿ ನೀರು ಕೊಡಲಾಯಿತು. ಶಾಸಕರು, ಜಿ.ಪಂ. ಉಪಾಧ್ಯಕ್ಷರು, ತಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಅಧಿಕಾರಿಗಳಿಗೆ ಬಾಟಲಿಯಲ್ಲಿ ನೀರು ನೀಡಿದ್ದು ಸರ್ಕಾರ ಆದೇಶ ಮತ್ತು ಆಶಯವನ್ನು ಪ್ರಶ್ನಿಸುವಂತಿತ್ತು.
ಮೊಬೈಲ್ ಮೊಬೈಲ್ ಮೊಬೈಲ್
ಸಭೆಗೆ ಬಂದ ಹಲವು ಅಧಿಕಾರಿಗಳು ಮೊಬೈಲ್’ನಲ್ಲಿ ಬ್ಯುಸಿಯಾಗಿದ್ದರು. ಸಭೆಯ ನಡುವೆಯು ಮೊಬೈಲ್’ನಲ್ಲಿ ಮಾತನಾಡುತ್ತಿದ್ದರು. ಕೆಲವರು ಮೊಬೈಲ್’ನಲ್ಲಿ ಏನನ್ನೋ ಸರ್ಚ್ ಮಾಡುತ್ತಿದ್ದರು. ಮತ್ತೊಂದೆಡೆ ಸಭೆಯಲ್ಲಿ ಆಯಾ ಇಲಾಖೆಯ ಕುರಿತು ಚರ್ಚೆ ಮುಗಿಯುತ್ತಿದ್ದಂತೆ ಎದ್ದು ಹೊರ ನಡೆಯುತ್ತಿದ್ದದ್ದು ಸಾಮಾನ್ಯವಾಗಿತ್ತು.
ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು?
ಎಸ್ಸೆಸ್ಸೆಲ್ಸಿ ಫಲಿತಾಂಶದ ಹೆಚ್ಚಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಫಲಿತಾಂಶ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಸಭೆಗೆ ತಿಳಿಸಿದರು. ಈ ವೇಳೆ ಶಾಸಕ ಅಶೋಕ್ ನಾಯ್ಕ್ ಅವರು ಎಷ್ಟು ಫಲಿತಾಂಶ ಬರಲಿದೆ ಎಂದು ಪ್ರಶ್ನಿಸಿದರು. ಶೇ.90ರಷ್ಟು ಫಲಿತಾಂಶದ ಗುರಿ ಹೊಂದಿದ್ದೇವೆ ಎಂದರು.
ಹಾಸ್ಟೆಲ್ ದುರಸ್ಥಿಗೆ ಸಮಾಜ ಕಲ್ಯಾಣ ಇಲಾಖೆಗೆ ಹಣ ಬಂದಿದ್ದು ಶಾಸಕರ ಗಮನಕ್ಕೆ ತಂದಿಲ್ಲ ಎಂದು ಅಶೋಕ್ ನಾಯ್ಕ್ ಗರಂ ಆದರು. 20 ಲಕ್ಷ ರೂ. ಹಣ ಬಂದಿದ್ದು, ಯಾವ್ಯಾವ ಹಾಸ್ಟೆಲ್ ದುರಸ್ಥಿತಿ ಮಾಡಲಾಗುತ್ತಿದೆ ಎಂಬುದನ್ನು ತಿಳಿಸಬೇಕು ಎಂದು ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೊರೆಸಿರುವ ಬೋರ್’ವೆಲ್’ಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ನೀಡಬೇಕು, ಮಾರ್ಚ್’ನಲ್ಲೇ ಮುಗಿಯಬೇಕಿದ್ದ ನಿರಂತರ ಜ್ಯೋತಿ ಕಾಮಗಾರಿ ಈವರೆಗೂ ಮುಗಿದಿಲ್ಲ. ಕೂಡಲೇ ಗುತ್ತಿಗೆದಾರನನ್ನು ಬ್ಲಾಕ್ ಲಿಸ್ಟ್’ಗೆ ಹಾಕುವಂತೆ ಶಾಸಕ ಅಶೋಕ್ ನಾಯ್ಕ್ ಸೂಚಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Plastic Bottle water is being served in Shimoga Taluk Panchayath Meeting. It is the violation of Government Orders.