SHIVAMOGGA LIVE NEWS | 26 FEBRURARY 2023
SHIMOGA : ಬೆಂಗಳೂರು ನಂತರ ಅತಿ ಉದ್ದದ ರನ್ ವೇ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ದಶಕದ ಕನಸು ಕೊನೆಗೂ ನನಸಾಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಕುರಿತು ತಿಳಿಯಬೇಕಾದ ಪ್ರಮುಖ 10 ವಿಚಾರಗಳು (Top 10 Points) ಇಲ್ಲಿವೆ.
2006ರಲ್ಲಿ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ಸಿಕ್ಕಿತ್ತು. ಸ್ಥಳ ಪರಿಶೀಲನೆ ನಡೆಸಲಾಯಿತು. ಆಯನೂರು ಅಥವಾ ಸೋಗಾನೆಯಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡುವ ಕುರಿತು ಚರ್ಚೆಯಾಗುತ್ತದೆ. ಅಂತಿಮವಾಗಿ ಸೋಗಾನೆಯಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. 2008 ಜೂನ್ 20ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸುತ್ತಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿಮಾನ ನಿಲ್ದಾಣಕ್ಕಾಗಿ 662 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಗುತ್ತಿಗೆ ಪಡೆದ ಸಂಸ್ಥೆ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುತ್ತದೆ. ಕೆಲವೆ ದಿನಗಳಲ್ಲಿ ಕಾಮಗಾರಿ ಸ್ಥಗಿತವಾಗುತ್ತದೆ. ಗುತ್ತಿಗೆ ಪಡೆದ ಸಂಸ್ಥೆಯ ಮುಖ್ಯಸ್ಥ ಹಣಕಾಸು ಹಗರಣವೊಂದರಲ್ಲಿ ಸಿಲುಕಿದ್ದರಿಂದ ವಿಮಾನ ನಿಲ್ದಾಣದ ಕೆಲಸ ನಿಂತು ಹೋಗುತ್ತದೆ. ಅಷ್ಟು ಹೊತ್ತಿಗೆ ಸರ್ಕಾರವು ಬದಲಾಗುತ್ತದೆ. (Top 10 Points)
ರನ್ ವೇ ನಿರ್ಮಾಣಕ್ಕಾಗಿ ಸ್ವಲ್ಪ ದೂರದವರೆಗೆ ನೆಲ ಸಮತಟ್ಟು ಮಾಡಿದ್ದು, ವಿನಾಯಕ ನಗರದ ಪಕ್ಕದಲ್ಲಿ ಕಚೇರಿಗಾಗಿ ಕಟ್ಟಡ ನಿರ್ಮಿಸಿದ್ದು ಹೊರತು ಉಳಿದ್ಯಾವ ಕಾಮಗಾರಿಯು ಆಗಿರಲಿಲ್ಲ. ಇದೆ ಕಾರಣಕ್ಕೆ 2015ರಲ್ಲಿ ರಾಜ್ಯ ಸರ್ಕಾರ ಭೂ ಸ್ವಾಧೀನವನ್ನು ರದ್ದುಗೊಳಿಸಿತು. ಅಲ್ಲದ ಮರು ಟೆಂಡರ್ ಕರೆಯಲು ನಿರ್ಧರಿಸಿತು.
ಹಾಳು ಕೊಂಪೆ ಅಂತಾಗಿದ್ದ ವಿಮಾನ ನಿಲ್ದಾಣದ ಜಾಗದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಜೋಳ ಬೆಳೆಯಲು ಆರಂಭಿಸಿದರು. ಸ್ವಲ್ಪ ಜಾಗದಲ್ಲಿ ಜೋಳ ಒಣಗಿಸುವ ಕಣ ನಿಮಿಸಿದ್ದರು. ದನ ಕರು ಮೇಯಲು ಬಿಡುತ್ತಿದ್ದರು. ವಿನಾಯಕ ನಗರ ಪಕ್ಕದಲ್ಲಿದ್ದ ವಿಮಾನ ನಿಲ್ದಾಣದ ಕಟ್ಟಡ ಅನೈತಿಕ ಚಟುವಟಿಕೆ ತಾಣವಾಗಿತ್ತು. (Top 10 Points)
ಯಡಿಯೂರಪ್ಪ ಅವರು ಪುನಃ ಮುಖ್ಯಮಂತ್ರಿ ಆಗುತ್ತಿದ್ದಂತೆ ವಿಮಾನ ನಿಲ್ದಾಣದ ಕನಸು ಪುನಃ ಚಿಗುರೊಡೆಯಿತು. 2020ರ ಜೂನ್ 15ರಂದು ಕಾಮಗಾರಿಗೆ ಪುನಃ ಚಾಲನೆ ನೀಡಿದರು. ಉಡಾನ್ ಯೋಜನೆ ಅಡಿ ವಿಮಾನ ನಿಲ್ದಾಣ ಕಾಮಗಾರಿ ಪುನಾರಂಭವಾಯಿತು. ಹೈಟೆಕ್ ಟರ್ಮಿನಲ್, 3.2 ಕಿ.ಮೀ. ರನ್ ವೇ, ನೈಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನು ಯೋಜನೆಗೆ ಅಳವಡಿಸಲಾಯಿತು.
ಎರಡು ಹಂತದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಟರ್ಮಿನಲ್, ರನ್ ವೇ, ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡಗಳನ್ನು ನಿರ್ಮಿಸಲಾಯಿತು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಅತಿ ಉದ್ದನೆಯ, ಅಂತಾರಾಷ್ಟ್ರೀಯ ಗುಣಮಟ್ಟದ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಇದಾಯಿತು.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಗ್ರೀನ್ ಫೀಲ್ಡ್ ಡೊಮಾಸ್ಟಿಕ್ ಏರ್ ಪೋರ್ಟ್ ಎಂದು ಕರೆಯಲಾಗುತ್ತಿದೆ. ಇದು ಕರ್ನಾಟಕದ 9ನೇ ಡೊಮಾಸ್ಟಿಕ್ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ, ಮಂಗಳೂರು ಜಿಲ್ಲೆಗಳಂತೆ ಶಿವಮೊಗ್ಗ ಜಿಲ್ಲೆಯೂ ಡೊಮಾಸ್ಟಿಕ್ ವಿಮಾನ ನಿಲ್ದಾಣ ಹೊಂದಿದಂತಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 4320 ಚದರ ಅಡಿಯ ಟರ್ಮಿನಲ್ ನಿರ್ಮಿಸಲಾಗಿದೆ. ಎಂತಹ BUSY ಸಂದರ್ಭದಲ್ಲೂ ಒಟ್ಟಿಗೆ 200 ರಿಂದ 300 ಪ್ರಯಾಣಿಕರನ್ನು ಇಲ್ಲಿ ನಿರ್ವಹಿಸಬಹುದಾಗಿದೆ. ಚೆಕ್ ಇನ್ ಕೌಂಟರ್, ವೇಯ್ಟಿಂಗ್ ಲಾಂಜ್, ಕೆಫೆಟೇರಿಯಾ, ವಿಐಪಿ ಲಾಂಜ್, ಸೆಕ್ಯೂರಿಟಿ ಚೆಕಿಂಗ್ ಸೇರಿದಂತೆ ಅಂತಾರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆ ಈ ವಿಮಾನ ನಿಲ್ದಾಣದಲ್ಲಿದೆ.
ಪ್ರಸ್ತುತ 775 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಇಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡ ಸದ್ಯ ಶಿವಮೊಗ್ಗದಲ್ಲಿರುವ ಅತಿ ಎತ್ತರದ ಕಟ್ಟಡವಾಗಿದೆ. ಇನ್ನು ಇಲ್ಲಿರುವ ರನ್ ವೇ ಏರ್ ಬಸ್ ಎ320 ಮತ್ತು ಬೋಯಿಂಗ್ 737 ಮಾದರಿಯ ದೊಡ್ಡ ವಿಮಾನಗಳು ಲ್ಯಾಂಡಿಂಗ್ ಆಗುವಷ್ಟು ಉದ್ದನೆಯದ್ದಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಗೆ 50 ವರ್ಷದ ಹಿಂದೆಯೇ ವಿಮಾನ ಬರುತ್ತಿತ್ತು, ಎಲ್ಲಿ ಲ್ಯಾಂಡ್ ಆಗುತ್ತಿದ್ದವು ಗೊತ್ತಾ?
ಪ್ರಸ್ತುತ ಇಂಡಿಗೋ ಏರ್ ಲೈನ್ಸ್ ಮತ್ತು ಸ್ಟಾರ್ ಏರ್ ವಿಮಾನ ಸಂಸ್ಥೆಗಳು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವನೆ ಒದಗಿಸಲು ಆಸಕ್ತಿ ತೋರಿವೆ ಎಂದು ಹೇಳಲಾಗುತ್ತಿದೆ. ಎಲ್ಲವು ಅಂದುಕೊಂಡ ಹಾಗೆ ಆದರೆ ಇನ್ನೊಂದು ತಿಂಗಳಲ್ಲಿ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ.