SHIMOGA, 26 JULY 2024 : ಅರಸಾಳು ಬಳಿ ರೈಲ್ವೆ ಹಳಿಗೆ (Tree) ಅಡ್ಡಲಾಗಿ ಮರ ಬಿದ್ದಿರುವುದರಿಂದ ಶಿವಮೊಗ್ಗ – ಸಾಗರ ನಡುವೆ ರೈಲು ಸಂಚಾರ ವ್ಯತ್ಯಯವಾಗಿದೆ. ಮಧ್ಯಾಹ್ನ ಬೆಂಗಳೂರಿನಿಂದ ಹೊರಟಿದ್ದ ಇಂಟರ್‌ಸಿಟಿ ರೈಲು ಅರಸಾಳು ನಿಲ್ದಾಣದಲ್ಲಿ ನಿಂತಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಸೂಡೂರು ಬಳಿ ರೈಲು ಹಳಿಗೆ ಅಡ್ಡಲಾಗಿ ಮರ ಬಿದ್ದಿದೆ. ಕರೆಂಟ್ ವಯರ್ ತುಂಡಾಗಿ ರೈಲಿನ ಮೇಲೆ ಬಿದ್ದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಇದರಿಂದ ರೈಲು ಸಂಚಾರ ವ್ಯತ್ಯಯವಾಗಿದೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ಇಂಟರ್‌ಸಿಟಿ ರೈಲು, ರಾತ್ರಿ 7.47ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರಟಿತ್ತು. ರಾತ್ರಿ 8.23ಕ್ಕೆ ಅರಸಾಳು ನಿಲ್ದಾಣದ ಬಳಿ ಇಂಟರ್ ಸಿಟಿ ರೈಲು ನಿಂತಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
