ಮೈಸೂರು, ಮಂಡ್ಯದ ಮಹಿಳೆಯರು ತೆರಳುತ್ತಿದ್ದ ಟಿ.ಟಿ. ಕುಂಸಿ ಬಳಿ ಪಲ್ಟಿ

ಶಿವಮೊಗ್ಗ: ಯಾಣ ಮತ್ತು ಹೊನ್ನಾವರ ಪ್ರವಾಸಕ್ಕೆ (Tour) ತೆರಳುತ್ತಿದ್ದ ಟಿ.ಟಿ ವಾಹನ (TT vehicle) ಚಾಲಕನ ನಿಯಂತ್ರಣ ತಪ್ಪಿ (Lost control) ರಸ್ತೆ ಮೇಲೆ ಪಲ್ಟಿಯಾಗಿದೆ (Overturned). ಘಟನೆಯಲ್ಲಿ ಪ್ರವಾಸಿಗರಿಗೆ (Tourists) ಸಣ್ಣಪುಟ್ಟ ಗಾಯಗಳಾಗಿವೆ (Minor injuries).

ಮೈಸೂರು, ಮಂಡ್ಯ ಮೂಲದ ಪ್ರವಾಸಿಗರು

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಕಗ್ಗೆರೆ ಗ್ರಾಮದ ಕನ್ನಿಕಾ (43) ಹಾಗೂ ಅವರ ಸ್ನೇಹಿತರಾದ ಸವಿತಾ, ದೀಪಿಕಾ, ವಿದ್ಯಾಶ್ರೀ, ಲೀಲಾ, ಮಮತಾ, ಶಶಿಕಲಾ ಮತ್ತು ಅವರ ಮಕ್ಕಳು ಸೇರಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮದಿಂದ ಯಾಣ ಮತ್ತು ಹೊನ್ನಾವರ ಟಿ.ಟಿ. ವಾಹನದಲ್ಲಿ ಪ್ರವಾಸಕ್ಕೆ ಹೊರಟಿದ್ದರು.

ACCIDENT-NEWS-GENERAL-IMAGE.

ದಿಢೀರ್‌ ಅಡ್ಡ ಬಂದ ಪ್ರಾಣಿ

ಟಿ.ಟಿ. ವಾಹನ ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಕುಂಸಿ ಗ್ರಾಮದ ಗೋಡೌನ್ (Godown) ಸಮೀಪ ತೆರಳುತ್ತಿತ್ತು. ಈ ಸಂದರ್ಭ ಯಾವುದೋ ಪ್ರಾಣಿ ರಸ್ತೆಯಲ್ಲಿ ಟಿ.ಟಿ. ವಾಹನಕ್ಕೆ ಅಡ್ಡ ಬಂದಿದೆ ಎನ್ನಲಾಗಿದೆ. ಈ ವೇಳೆ ಟಿ.ಟಿ ವಾಹನದ ಚಾಲಕ (Driver) ಉಮಾಶಂಕರ್ ಆರಾಧ್ಯ ವಾಹನವನ್ನು ನಿಯಂತ್ರಿಸಲಾಗದೆ, ವಾಹನವು ರಸ್ತೆಯ ಮೇಲೆ ಪಲ್ಟಿಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಎಂಟು ಮಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ (Meggan Hospital) ದಾಖಲು ಮಾಡಲಾಗಿದೆ. ಚಾಲಕ ಉಮಾಶಂಕರ್‌ ಆರಾಧ್ಯ ವಿರುದ್ಧ ಕುಂಸಿ ಪೊಲೀಸ್ ಠಾಣೆಯಲ್ಲಿ (Kumsi Police Station) ಪ್ರಕರಣ ದಾಖಲಾಗಿದೆ (Case registered).

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp