ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 21 OCTOBER 2024 : ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೊಂಡಜ್ಜಿ ಹಳ್ಳ ತುಂಬಿ ಸೇತುವೆ (Bridge) ಮೇಲೆ ನೀರು ಹರಿಯುತ್ತಿದೆ. ಹಾಗಾಗಿ ಯಡವಾಲ – ಹಿಟ್ಟೂರು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. 10 ದಿನದ ಹಿಂದೆ ಇದೇ ಸೇತುವೆ ದಾಟುವಾಗ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದರು.
ಯಡವಾಲ – ಹಿಟ್ಟೂರು ಮಾರ್ಗದ ಸೇತುವೆ ಮೇಲೆ ರಭಸವಾಗಿ ನೀರು ಹರಿಯುತ್ತಿದೆ. ಇದೇ ಕಾರಣಕ್ಕೆ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಪೊಲೀಸರು ಬ್ಯಾರಿಕೇಡ್ ಇರಿಸಿ ವಾಹನ ಸಂಚಾರ ನಿರ್ಬಂಧಿಸಿದ್ದಾರೆ. ಯಡವಾಲದಿಂದ ಹಾರನಹಳ್ಳಿ, ಸವಳಂಗ ಕಡೆಗೆ ತೆರಳುವವರು ಈಗ ಮುದುವಾಲ ಮೂಲಕ ಸಂಚರಿಸಬೇಕಾಗುತ್ತದೆ. (ಫೋಟೊ, ಮಾಹಿತಿ : ಪ್ರವೀಣ್ ಯಡವಾಲ)
ಇದನ್ನೂ ಓದಿ » ಕೊಚ್ಚಿ ಹೋದ ವ್ಯಕ್ತಿಯ ಶೋಧ ಕಾರ್ಯ ಸ್ಥಗಿತ, ಸ್ಥಳಕ್ಕೆ ಸಂಸದ ಭೇಟಿ
ಇದೇ ಸೇತುವೆ ದಾಟುವಾಗ ಅ.9ರಂದು ನ್ಯಾಮತಿಯ ಇಕ್ಬಾಲ್ ಎಂಬುವವರು ಬೈಕ್ ಸಹಿತ ಕೊಚ್ಚಿ ಹೋಗಿದ್ದರು. ಎರಡು ದಿನದ ಬಳಿಕ ಅವರ ಮೃತದೇಹ ಪತ್ತೆಯಾಗಿತ್ತು.
ಕೋಡಿ ಬಿದ್ದ ಕೆರೆ
ಇನ್ನೊಂದೆಡೆ ಇಲ್ಲಿನ ಹಾರುವಿನ ಕೆರೆ ಕೋಡಿ ಬಿದ್ದಿದೆ. ಬಹಳ ಸಮಯದ ಬಳಿಕ ಕೆರೆ ತುಂಬಿ ನೀರು ಹೊರಗೆ ಹರಿಯುತ್ತಿದೆ. ಇದನ್ನು ನೋಡಲು ಗ್ರಾಮಸ್ಥರು ಕೆರೆ ಬಳಿ ಧಾವಿಸಿದ್ದಾರೆ. ಫೋಟೊ, ವಿಡಿಯೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422