ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | BHADRA DAM | 06 ಮೇ 2022
ಗದಗ, ಬೆಟಗೇರಿ ಭಾಗದ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ (DAM) ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ.6ರ ರಾತ್ರಿ 10.30ರಿಂದ ಮೇ 11ರವರೆಗೆ ಒಟ್ಟು 2.25 ಟಿಎಂಸಿ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತದೆ. ಮೇ 6ರಂದು 3800 ಕ್ಯೂಸೆಕ್, ಮೇ 7ರಂದು 4,340 ಕ್ಯೂಸೆಕ್, ಮೇ 8ರಿಂದ 10ರವರೆಗೆ ತಲಾ 4,520 ಕ್ಯೂಸೆಕ್ ಹಾಗೂ ಮೇ 11ರಂದು 4,340 ಕ್ಯೂಸೆಕ್ ನೀರನ್ನು ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ನದಿ ತಟದಲ್ಲಿ ಯಾವುದೆ ಚಟುವಟಿಕೆ ನಡೆಸಬಾರದು. ಜಾನುವಾರುಗಳನ್ನು ನದಿ ಬಳಿ ಮೇಯಲು ಬಿಡಬಾರದು. ಇನ್ನು, ನೀರು ಬಿಡುವ ಸಂದರ್ಭ ನದಿಯನ್ನು ನೀರನ್ನು ಮೇಲೆತ್ತಲು ಪಂಪ್ ಸೆಟ್ ಬಳಕೆ ನಿಷೇಧಿಸಲಾಗಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ – ಭದ್ರಾ ನಾಲೆಯಲ್ಲಿ ನೀರು ನಿಲ್ಲಿಸುವ ಕುರಿತು ಕಾಡಾ ಸಭೆಯಲ್ಲಿ ಮಹತ್ವದ ನಿರ್ಧಾರ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422