ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 21 SEPTEMBER 2024 : ಕಾಡಾನೆ (Wild Elephant) ದಾಳಿಗೆ ಸಿರಿಗೆರೆ ಭಾಗದಲ್ಲಿ ಬೆಳೆ ನಷ್ಟ ಉಂಟಾಗಿದೆ. ಕಳೆದ ರಾತ್ರಿ ಈ ಭಾಗದಲ್ಲಿ ತೋಟ, ಹೊಲಕ್ಕೆ ನುಗ್ಗಿರುವ ಕಾಡಾನೆಗಳು ಬೆಳೆ ಹಾನಿ ಮಾಡಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ತಾಲೂಕು ಸಿರಿಗೆರೆಯ ಆಂಧ್ರ ಕ್ಯಾಂಪ್ ಭಾಗದಲ್ಲಿ ಕಳೆದ ರಾತ್ರಿ ಹಲವರ ಜಮೀನಿಗೆ ಕಾಡಾನೆಗಳು ದಾಳಿ ನಡೆಸಿವೆ. ಜೋಳ, ಬಾಳೆ, ಅಡಿಕೆ, ತೆಂಗು ಬೆಳೆಗೆ ಹಾನಿಯಾಗಿದೆ. ಆನೆಗಳ ಉಪಟಳ ತಡೆಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿಗೆ ಮಾಡಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸ್ಥಳೀಯರಾದ ರಾಜೇಶ್, ಕಳೆದ ವಾರವು ಆನೆಗಳು ಬಂದಿದ್ದವು. ರಾತ್ರಿ ವೇಳೆ ಜಮೀನು ಕಾಯಲು ಹೋಗಿದ್ದರಿಂದ ಕೂಗಿ ಆನೆಗಳನ್ನು ಓಡಿಸಿದ್ದೆವು. ಇವತ್ತು ಕಾಡಾನೆಗಳು ದಾಳಿ ನಡೆಸಿವೆ. ಬೆಳೆ ನಷ್ಟಕ್ಕೆ ಪರಿಹಾರ ಕೇಳಿದರೆ ನೀವು ಆನೆ ಓಡಾಡುವ ಜಾಗದಲ್ಲಿ ಜಮೀನು ಮಾಡುತ್ತಿದ್ದೀರ ಎಂದು ಅಧಿಕಾರಿಗಳು ಹಾರಿ ಉತ್ತರ ನೀಡುತ್ತಾರೆ. ಬೆಳೆ ನಷ್ಟದಿಂದಾಗಿ ನಮ್ಮ ಜೀವನಕ್ಕೆ ತೊಂದರೆಯಾಗುತ್ತಿದೆ. ಆನೆಗಳ ಹಾವಳಿಗೆ ಅರಣ್ಯ ಇಲಾಖೆ ತಡೆಯೊಡ್ಡಲಿ ಎಂದರು.
ತಾಲೂಕಿನ ಆಯನೂರು ಹೋಬಳಿಯ ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲುಮೆಜಡ್ಡು ವರದಳ್ಳಿ ಚೌಡಪ್ಪ ಎಂಬುವರ ಗದ್ದೆಗೆ ಬುಧವಾರ ಬೆಳಗಿನ ಜಾವ ನುಗ್ಗಿದ ಕಾಡಾನೆಗಳು ಬೆಳೆ ನಾಶಮಾಡಿವೆ. ಮೂರು ಆನೆಗಳು ಕೂಡಿ, ಯರೆಬೀಸು, ಕೆಸುವಿನ ಹೊಂಡ, ಅಡೇರಿ ಭಾಗದಲ್ಲಿ ಸಂಚರಿಸುತ್ತಿವೆ.ತಮ್ಮಡಿಹಳ್ಳಿ ಭಾಗದಲ್ಲಿ ಕಾಣಿಸಿದ್ದ ಆನೆ
ಗದ್ದೆ, ತೋಟಗಳಿಗೆ ನುಗ್ಗಿ ನಿರಂತರವಾಗಿ ಫಸಲು ಹಾಳುಮಾಡುತ್ತಿವೆ. ಈ ಭಾಗದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದು, ಸಾಗುವಳಿ ಮಾಡಿದ ಭತ್ತದ ಗದ್ದೆಯನ್ನು ನಾಶಪಡಿಸುತ್ತಿವೆ. ಕೂಡಲೇ ಆನೆಗಳನ್ನು ಸ್ಥಳಾಂತರ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ » ಸಾ ಮಿಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಲೀಕನ ಮಗ