ಶಿವಮೊಗ್ಗ ಲೈವ್.ಕಾಂ | AYANUR NEWS | 29 ಜೂನ್ 2020
ಸ್ನೇಹಿತರೊಂದಿಗೆ ಗೌಡನಕೆರೆಯಲ್ಲಿ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಕೆರೆಯಲ್ಲಿ ಮುಳುಗಿರುವ ಸಾದ್ಯತೆ ಇರುವುದರಿಂದ ಶೋಧ ಕಾರ್ಯ ನಡೆಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ವೆಂಕಟೇಶನಗರದ ನಿವಾಸಿ ಸಂತೊಷ್ (38) ನಾಪತ್ತೆಯಾದವರು. ಸ್ನೇಹಿತರಾದ ಅಖಿಲೇಶ್, ವಿನಾಯಕ ಮತ್ತು ನವೀನ್ ಅವರ ಜೊತೆಗೆ ಸಂತೋಷ್ ಗೌಡನಕೆರೆಯಲ್ಲಿ ಈಜಲು ತೆರಳಿದ್ದರು.
ಹಣಗೆರೆಕಟ್ಟೆಗೆ ಹೋಗಿ ಬರುತ್ತಿದ್ದರು
ಎಲ್ಲರು ಆಟೋದಲ್ಲಿ ಹಣಗೆರೆಕಟ್ಟೆಗೆ ತೆರಳಿದ್ದರು. ಅಲ್ಲಿಂದ ಹಿಂತಿರುಗುವ ವೇಳೆ ಗೌಡನಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಆಳವಾದ ಜಾಗದಲ್ಲಿ ಈಜುವಾಗ ಸಂತೋಷ್ ಕಣ್ಮರೆಯಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕತ್ತಲಾಗುವವರೆಗೂ ಶೋಧ ಕಾರ್ಯ
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಭಾನುವಾರ ಸಂಜೆವರೆಗೆ ಶೋಧ ಕಾರ್ಯ ನಡೆಸಿದರು. ಕತ್ತಲಾದ ಹಿನ್ನೆಲೆ ಶೋಧ ಕಾರ್ಯ ಸ್ಥಗಿತಗೊಳಿಸಲಾಯಿತು. ಎರಡು ಬೋಟ್ ಬಳಸಿ ಸಂತೋಷ್ ಮುಳುಗಿರುಬಹುದಾದ ಸ್ಥಳದಲ್ಲೆಲ್ಲ ಹುಡುಕಟ ಮಾಡಲಾಯಿತು. ಆದರೆ ಸಂತೋಷ್ ಪತ್ತೆಯಾಗಿಲ್ಲ.
ಸಂತೋಷ್ ಶಿವಮೊಗ್ಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]