ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SORABA NEWS, 15 NOVEMBER 2024 : ಅರಣ್ಯ ಭೂಮಿ (Forest) ಒತ್ತುವರಿ ಆರೋಪದ ಹಿನ್ನೆಲೆ ಪರಿಶೀಲನೆಗೆ ತೆರಳಿದ ಇಲಾಖೆ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಾಗರ ಡಿಸಿಎಫ್ ಮೋಹನ್‌ಕುಮಾರ್ ಹೇಳಿದರು.
ಅರಣ್ಯ ಜಾಗದಲ್ಲಿ ಅನಾನಸ್ ಬೆಳೆ
ಸೊರಬ ತಾಲೂಕಿನ ಗಡಿಭಾಗ ಚಿಕ್ಕಲಗೋಡು ಗ್ರಾಮದಲ್ಲಿ ಶಿರಸಿ ಭಾಗದಿಂದ ಆನೆಗಳ ಹಿಂಡು ಬಂದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಉಮೇಶ್ ಹಾಗೂ ಇಮ್ರಾನ್ ಸ್ಥಳ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಅರಣ್ಯ ಜಾಗ ಒತ್ತುವರಿ ಮಾಡಿ ಅನಾನಸ್ ಬೆಳೆದಿದ್ದು ಪತ್ತೆಯಾಗಿದೆ. ಕ್ರಮಕ್ಕೆ ಮುಂದಾದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ.
ರಶೀದ್ ಬನವಾಸಿ ಎಂಬಾತ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಸಿಬ್ಬಂದಿಯನ್ನು ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕ್ಕಲಗೋಡು ಗ್ರಾಮದಲ್ಲಿ ಅರಣ್ಯ ಒತ್ತುವರಿ ಮಾಡಿದ್ದ ಶಿವಪ್ಪ ಈರಪ್ಪ ಹಾಗೂ ಬಸಪ್ಪ ಈರಪ್ಪ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇವರಿಂದ ಭೂಮಿ ಗುತ್ತಿಗೆ ಪಡೆದು ಅನಾನಸ್ ಬೆಳೆದಿದ್ದಲ್ಲದೆ ಹಲ್ಲೆ ನಡೆಸಿದ ರಫೀಕ್ ಬನವಾಸಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರಫೀಕ್ ಪರಾರಿಯಾಗಿದ್ದಾನೆ.
ಮೋಹನ್‌ಕುಮಾರ್, ಸಾಗರ ಡಿಸಿಎಫ್
ಅಕ್ರಮವಾಗಿ ಅರಣ್ಯ ಪ್ರವೇಶಿಸಿದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಲಾರಿಯಲ್ಲಿದ್ದ ಅನಾನಸ್ ಹಣ್ಣನ್ನು ನ್ಯಾಯಾಲಯದ ಅನುಮತಿ ಪಡೆದು ಹರಾಜು ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ » ನ.20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422