ಮಹಿಳೆ ಸಾವಿಗೆ ಕಾರಣವಾದ ಎಮ್ಮೆ, ಹೇಗಾಯ್ತು ಘಟನೆ?

ಸೊರಬ: ಚಲಿಸುತ್ತಿದ್ದ ಬೈಕ್ ಪಲ್ಟಿಯಾಗಿ ಮಹಿಳೆಯೊಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ (Death news). ತಾಲೂಕಿನ ತಲ್ಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ.

ಬೈಕ್‌ ಅಪಘಾತ ಆಗಿದ್ದೇಕೆ?

ರತ್ನಮ್ಮ (62) ಮೃತ ದುರ್ದೈವಿ. ಮೇ 10ರ ಮಧ್ಯಾಹ್ನ ರತ್ನಮ್ಮ ಅವರು ತಂಗಿ ಗಂಡ ಸುರೇಶ್ ಎಂಬುವವರ ಬೈಕ್‌ನಲ್ಲಿ (Motorcycle accident) ಲಕ್ಕವಳ್ಳಿಯಿಂದ ಆನವಟ್ಟಿ ಮಾರ್ಗವಾಗಿ ಶಿಕಾರಿಪುರದ ದೇವಿಕೊಪ್ಪ ಗ್ರಾಮಕ್ಕೆ ಹೋಗುತ್ತಿದ್ದರು. ತಲ್ಲೂರು ಗ್ರಾಮದ ಶಾಲೆಯ ಬಳಿ ಬೈಕ್‌ ತೆರಳುತ್ತಿದ್ದ ರಸ್ತೆಯಲ್ಲಿ ಎಮ್ಮೆ ಅಡ್ಡ ಬಂದಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬೈಕ್‌ ನಿಯಂತ್ರಣ ತಪ್ಪಿ (Loss of control) ಕೆಳಗೆ ಬಿದ್ದಿದೆ.

ACCIDENT-NEWS-GENERAL-IMAGE.

ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

ಬೈಕಿನ ಹಿಂಬದಿಯಲ್ಲಿದ್ದ ರತ್ನಮ್ಮ ಅವರ ತಲೆಯ ಬಲಬದಿ ಮತ್ತು ಕಿವಿಯ ಹತ್ತಿರ ತೀವ್ರ ರಕ್ತಗಾಯಗಳಾಗಿವೆ (Severe head injury). ಗಂಭೀರವಾಗಿ ಗಾಯಗೊಂಡಿದ್ದ ರತ್ನಮ್ಮ ಅವರನ್ನು ತಕ್ಷಣ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ (Government hospital) ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬೈಕ್ ಸವಾರ ಸುರೇಶ್ ಕೂಡ ಅಪಘಾತದಲ್ಲಿ ಗಾಯಗೊಂಡು ವೈದ್ಯಕೀಯ ಚಿಕಿತ್ಸೆ (Medical treatment) ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಆನವಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Police case registered).

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion