ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SORABA NEWS | 11 ನವೆಂಬರ್ 2021
ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠ ನೆನಪು ಮಾಡಿಕೊಂಡು ಸಮಯಪ್ರಜ್ಞೆ ಮೆರೆದ ಬಾಲಕಿ ತನ್ನ ತಮ್ಮನನ್ನು ರಕ್ಷಿಸಿದ್ದಾಳೆ. ವಿದ್ಯುತ್ ಶಾಕ್’ಗೆ ಒಳಗಾಗಿದ್ದ ತಮ್ಮನನ್ನು ಅಕ್ಕ ರಕ್ಷಣೆ ಮಾಡಿದ್ದು, ಜನರು ಬೆನ್ನು ತಟ್ಟಿದ್ದಾರೆ.
ಸೊರಬ ತಾಲೂಕು ಉರುಗನಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ತಮ್ಮ ಧನುಷ್’ಗೆ ವಿದ್ಯುತ್ ಶಾಕ್ ತಗುಲಿತ್ತು. ಆಕ್ಕ ಪ್ರಾರ್ಥನಾ ತಮ್ಮನನ್ನು ರಕ್ಷಿಸಿದ್ದಾಳೆ.
ಹೇಗಾಯ್ತು ಘಟನೆ?
ಮನೆಯಲ್ಲಿ ಟಿವಿಗೆ ಅಳವಡಿಸಿದ್ದ ವೈರ್ ತಗುಲಿ ತಮ್ಮ ಧನುಷ್’ಗೆ ವಿದ್ಯುತ್ ಶಾಕ್ ಉಂಟಾಗಿತ್ತು. ಸಮೀಪದಲ್ಲೇ ಕುಳಿತು ಊಟ ಮಾಡುತ್ತಿದ್ದ ಅಕ್ಕ ಪ್ರಾರ್ಥನಾ, ನರಳಾಡುತ್ತಿದ್ದ ತಮ್ಮನನ್ನು ಗಮನಿಸಿದ್ದಾಳೆ. ಕೂಡಲೆ ಎದ್ದು ಹೋಗಿ, ತಮ್ಮನ ಶರ್ಟ್ ಹಿಡಿದು ಎಳೆದು ರಕ್ಷಿಸಿದ್ದಾಳೆ.
‘ವಿದ್ಯುತ್ ಶಾಕ್’ಗೆ ಒಳಗಾದ ವ್ಯಕ್ತಿಯನ್ನು ಮುಟ್ಟಬಾರದು ಎಂದು ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟಿದ್ದರು. ಅವರನ್ನು ಮುಟ್ಟದೆ ರಕ್ಷಿಸಬೇಕು ಎಂದು ತಿಳಿಸಿಕೊಟ್ಟಿದ್ದರು. ಅದು ನೆನಪಿಗೆ ಬಂದು, ಧನುಷ್’ನ ರಕ್ಷಣೆ ಮಾಡಿದ್ದೇನೆ’ ಎಂದು ಪ್ರಾರ್ಥನಾ ತಿಳಿಸಿದ್ದಾಳೆ.
ಪ್ರಾರ್ಥನಾ ಮತ್ತು ಧನುಷ್ ಉರುಗನಹಳ್ಳಿಯ ಧನಂಜಯ ಮತ್ತು ನೀಲಾವತಿ ಅವರ ಮಕ್ಕಳು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರ್ಥನಾ 5ನೇ ತರಗತಿ ಓದುತ್ತಿದ್ದಾಳೆ. ಧನುಷ್ 3ನೇ ತರಗತಿಯಲ್ಲಿ ವಿದ್ಯಭ್ಯಾಸ್ ಮಾಡುತ್ತಿದ್ದಾನೆ. ಬಾಲಕಿಯ ಸಮಯ ಪ್ರಜ್ಞೆಗೆ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422