ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಸೊರಬ | 27 ಸೆಪ್ಟೆಂಬರ್ 2019
ಜೋಳ ಮತ್ತು ಶುಂಠಿ ಬೆಳೆ ನಡುವೆ ಗಾಂಜಾ ಬೆಳೆ ಬೆಳೆದಿರುವುದನ್ನು ಪತ್ತೆ ಹಚ್ಚಲು ಅಬಕಾರಿ ಇಲಾಖೆ ಪುನಃ ಡ್ರೋಣ್ ಕಾರ್ಯಾಚರಣೆ ಆರಂಭಿಸಿದೆ. ಸೊರಬ ತಾಲೂಕಿನ ವಿವಿಧೆಡೆ ಮೊದಲ ಹಂತದ ಡ್ರೋಣ್ ಆಪರೇಷನ್ ನಡೆಸಲಾಗಿದೆ.
ಸಾಗದ್ದೆ, ಕೊಡಕಣಿ, ಮಾಳೆಕೊಪ್ಪ, ಸಾರೆಕೊಪ್ಪ ಗ್ರಾಮಗಳಲ್ಲಿ ಜೋಳ ಮತ್ತು ಶುಂಠಿ ಬೆಳೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಡ್ರೋಣ್ ಹಾರಿಸಿಬಿಟ್ಟರು. ಆದರೆ ಗಾಂಜಾ ಪತ್ತೆ ಆಗಿಲ್ಲ. ಈ ನಡುವೆ ಡ್ರೋಣ್ ಕಾರ್ಯಾಚರಣೆ ನಡೆಸಿದ ಗ್ರಾಮಗಳಲ್ಲಿನ ಸಾರ್ವಜನಿಕರಲ್ಲಿ ಅಬಕಾರಿ ಇಲಾಖೆ ಜಾಗೃತಿ ಮೂಡಿಸಿತು.
ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕಿ ಲೀಲಾವತಿ ಅವರ ನೇತೃತ್ವದಲ್ಲಿ ಡ್ರೋಣ್ ಕಾರ್ಯಾಚರಣೆ ನಡೆಸಲಾಯಿತು. ಕಳೆದ ವರ್ಷ ಗಾಂಜಾ ಬೆಳೆ ಪತ್ತೆಗೆ ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಡ್ರೋಣ್ ಕಾರ್ಯಾಚರಣೆ ನಡೆಸಲಾಗಿತ್ತು. ಇದರಿಂದ ಗಾಂಜಾ ಬೆಳೆ ಪ್ರಮಾಣ ತಗ್ಗಿತ್ತು.
ಅಬಕಾರಿ ನಿರೀಕ್ಷಕಿ ಸುಷ್ಮಾ, ಉಪ ನಿರೀಕ್ಷಕರಾದ ಸುಧಾ, ಅಣ್ಣಪ್ಪ, ಸಿಬ್ಬಂದಿಗಳಾದ ಗಂಗಾಧರ್, ವೀರಭದ್ರಪ್ಪ, ಪುಟ್ಟಪ್ಪ, ಜೀವನ್, ಸಚಿನ್, ಡ್ರೋಣ್ ಕ್ಯಾಮರಾ ನಿರ್ವಾಹಕ ಅಭಿ, ರವೀಂದ್ರನಾಥ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422