ಸಾಲ ಬಾಧೆ, ಒಣಗುತ್ತಿದ್ದ ಅಡಕೆ ತೋಟ, ಮನನೊಂದು ರೈತ ಆತ್ಮಹತ್ಯೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 APRIL 2023

ANAVATTI : ಸಾಲ ಬಾಧೆ, ಅಡಕೆ ತೋಟ ಒಣಗುತ್ತಿದ್ದದ್ದನ್ನು ಕಂಡು ಮನನೊಂದಿದ್ದ ರೈತರೊಬ್ಬರು ಜಮೀನು ಪಕ್ಕದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಕಾತುವಳ್ಳಿ ಗ್ರಾಮದ ರೈತ (Farmer) ಮಲ್ಲಿಕಾರ್ಜುನ ಗೌಡ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

soraba anavatti graphics

ಅಡಕೆ ತೋಟದಲ್ಲಿ ಕೊಳವೆ ಬಾವಿಯಲ್ಲಿ ನೀರು ಬತ್ತಿತ್ತು. ವಿದ್ಯುತ್ ಸ್ಥಗಿತದಿಂದಾಗಿ ಕೊಳವೆ ಬಾವಿಯಲ್ಲಿದ್ದ ಅಲ್ಪಸ್ವಲ್ಪ ನೀರನ್ನು ಮೇಲೆತ್ತಿ ತೋಟಕ್ಕೆ ಹಾಯಿಸಲು ಆಗುತ್ತಿರಲಿಲ್ಲ. ಇದರಿಂದ ತೋಟ ಒಣಗುತ್ತಿದೆ ಎಂದು ಮನನೊಂದಿದ್ದರು. ಸಹಕಾರ ಸಂಘ ಮತ್ತು ಕೈ ಸಾಲ ಮಾಡಿಕೊಂಡಿದ್ದರು. ಇದೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ –ಶಿವಮೊಗ್ಗ ಸೇತುವೆ ಮೇಲೆ ಕಾರು ಡಿಕ್ಕಿಯಾಗಿ ತುಂಗಾ ನದಿಗೆ ಬಿದ್ದಿದ್ದ ಬೈಕ್ ಸವಾರ ಸಾವು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment