ವಿವಿಧ ದೇವಸ್ಥಾನಗಳಲ್ಲಿ ಹುಂಡಿ ಒಡೆದು ಕಾಣಿಕೆ ಹಣ ಕಳ್ಳತನ, ಆರೋಪಿ ಅರೆಸ್ಟ್‌

ಸೊರಬ: ತಾಲ್ಲೂಕಿನ ಕುಂಬತ್ತಿ ದುರ್ಗಾಂಬಾ ಹಾಗೂ ಗ್ರಾಮದ ಇನ್ನಿತರ ದೇವಸ್ಥಾನಗಳ ಕಾಣಿಕೆ ಹುಂಡಿ ಕಳ್ಳತನದ ಆರೋಪಿ ರಾಕೇಶ್(28) ಎಂಬಾತನನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಶಿಕಾರಿಪುರ ತಾಲ್ಲೂಕು ಪುನೇದಹಳ್ಳಿಯ ರಾಕೇಶ್ ಆ.26ರಂದು ನವೀನ್ ಎಂಬಾತನ ಜತೆ ಸೇರಿ ತಾಲ್ಲೂಕಿನ ಕುಂಬತ್ತಿ ದುರ್ಗಾಂಬಾ ದೇವಸ್ಥಾನ, ಸಾಗರ ತಾಲ್ಲೂಕಿನ ಜಂಬಾನಿ ಮಾರಿಕಾಂಬ ದೇವಸ್ಥಾನ, ಶಿರಾಳಕೊಪ್ಪದ ಬಸವನಂದಿಹಳ್ಳಿಯ ಚನ್ನಬಸವ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಕಳ್ಳತನ ನಡೆಸಿರುವುದಾಗಿ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Soraba-Police-Arrest-temple-hundi-theif

ಪಿಎಸ್‌ಐ ನವೀನ್, ಸಿಬ್ಬಂದಿ ರಾಘವೇಂದ್ರ, ವಿನಯ ಕಾರ್ಯಾಚರಣೆ ನಡೆಸಿದರು. ತನಿಖೆ ಮುಂದುವರೆದಿದೆ.