ಸೊರಬ ತಾಲೂಕಿನ ವಿವಿಧೆಡೆ ಮಳಿಗೆಗಳಲ್ಲಿ ಅಧಿಕಾರಿಗಳಿಂದ ದಿಢೀರ್‌ ತಪಾಸಣೆ, ಒಂದು ಕೇಸ್‌ ದಾಖಲು

SHIVAMOGGA LIVE NEWS | 23 MAY 2023

SORABA : ತಾಲೂಕಿನ ವಿವಿಧ ಮಳಿಗೆಗಳಲ್ಲಿ ಕಾರ್ಮಿಕ ಇಲಾಖೆ (labour department) ಅಧಿಕಾರಿಗಳು ದಿಢೀರ್‌ ತಪಾಸಣೆ ನಡೆಸಿದರು. ಈ ವೇಳೆ ಮಳಿಗೆಯೊಂದರಲ್ಲಿ ಬಾಲ ಕಾರ್ಮಿಕ ಪತ್ತೆಯಾಗಿದ್ದು, ಪ್ರಕರಣ ದಾಖಲು ಮಾಡಲಾಗಿದೆ.

Child-Labour-rescued-at-Soraba-Anavatti

ಕಾರ್ಮಿಕ ನೀರಿಕ್ಷಕರಾದ ಶಿಲ್ಪಾ, ಯೋಜನಾ ನಿರ್ದೇಶಕ ರಘುನಾಥ ಹಾಗೂ ಪೊಲೀಸ್ ಸಿಬ್ಬಂದಿ ರವಿ ಅವರು ವಿವಿಧ ತಪಾಸಣೆ ನಡೆಸಿದರು. ಈ ವೇಳೆ ಮಳಿಗೆಯೊಂದರಲ್ಲಿ ಬಾಲ ಕಾರ್ಮಿಕ ಪತ್ತೆಯಾಗಿದ್ದಾನೆ. ಆನವಟ್ಟಿ ಠಾಣೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ – ಭದ್ರಾ ನಾಲೆಯಲ್ಲಿ ಮುಂದುವರೆದ ಸರ್ಚ್‌ ಆಪರೇಷನ್‌, ಇಬ್ಬರ ಮೃತದೇಹ ಪತ್ತೆ, ಹೇಗಾಯ್ತು ಘಟನೆ?

ಇನ್ನು, ತಾಲೂಕಿನ ವಿವಿಧೆಡೆ ತಪಾಸಣೆ ವೇಳೆ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದರ ಪರಿಣಾಮದ ಕುರಿತು ಅಧಿಕಾರಿಗಳು (labour department) ತಿಳಿವಳಿಕೆ ಮೂಡಿಸಿದರು.

Kalleshwara-Enterprises.webp

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment