ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಸೊರಬ : ಶಾಲೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಶಿಕ್ಷಣ ಸಚಿವರೆ ಗುದ್ದಲಿ, ಪಿಕಾಸಿ ಹಿಡಿದು, ಮಣ್ಣು ಹೊತ್ತು ಹಾಕಿ ಕೂಲಿ ಕಾರ್ಮಿಕನಂತೆ (Wage Worker) ಕೆಲಸ ಮಾಡಿದ್ದಾರೆ. ಸಚಿವ ಮಧು ಬಂಗಾರಪ್ಪ ಶ್ರಮದಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೊರಬ ತಾಲೂಕು ಹುರುಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಮತ್ತು ಅಡುಗೆ ಮನೆ ನಿರ್ಮಾಣ ಕಾರ್ಯಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ಗುದ್ದಲಿ, ಪಿಕಾಸಿ, ಬುಟ್ಟಿ ಹಿಡಿದ ಮಿನಿಸ್ಟರ್
ಗುದ್ದಲಿ ಪೂಜೆ ಬಳಿಕ ಖುದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುದ್ದಲಿ, ಪಿಕಾಸಿ ಹಿಡಿದು ಕೆಲಸ ಮಾಡಿದರು. ಬುಟ್ಟಿಯಲ್ಲಿ ಮಣ್ಣು ಹೊತ್ತು ಹಾಕಿ ಶ್ರಮದಾನ ಮಾಡಿದರು. ಉದ್ಯೋಗ ಖಾತ್ರಿ ಯೋಜನೆ ಅಡಿ ಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಈ ಹಿನ್ನೆಲೆ ಸಚಿವರೆ ಇವತ್ತು ಕಾರ್ಮಿಕನಂತೆ (Wage Worker) ಕೆಲಸ ಮಾಡಿದರು.

ಕೈ ಜೊಡಿಸಿದ ಕೈ ಕಾರ್ಯಕರ್ತರು
ಸಚಿವ ಮಧು ಬಂಗಾರಪ್ಪ ಕೆಲಸ ಆರಂಭಿಸುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಕೂಡ ಶ್ರಮದಾನ ಮಾಡಿದರು. ಕಾಂಪೌಂಡ್ ನಿರ್ಮಾಣಕ್ಕೆ ಮಣ್ಣು ಹೊತ್ತು ಹಾಕಿದರು. ಜಿಲ್ಲಾ, ತಾಲೂಕು ಮಟ್ಟದ ಮುಖಂಡರು, ಕಾರ್ಯಕರ್ತರು ಸಚಿವರ ಜೊತೆಗೆ ಕೂಲಿ ಕೆಲಸ ಮಾಡಿದರು.
ಇದನ್ನೂ ಓದಿ » ನೆಹರು ಸ್ಟೇಡಿಯಂನಲ್ಲಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ, ಪ್ರತಿಜ್ಞೆ ಸ್ವೀಕಾರ, ಯಾರೆಲ್ಲ ಏನೆಲ್ಲ ಮಾತಾಡಿದರು?







