ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 8 FEBRURARY 2023
SORABA : ಸ್ವಗ್ರಾಮದಲ್ಲಿ ಸಹೊದರರ ಹಾಡು, ಡಾನ್ಸ್. ಜಾತ್ರೆಯಲ್ಲಿ ಊರ ಜನರ ಜೊತೆಗೆ ಕುಣಿದು ಕುಪ್ಪಲಿಸಿದ ಮಾಜಿ ಸಿಎಂ ಮಕ್ಕಳು. (MLA Song)

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಸ್ವಗ್ರಾಮ ಸೊರಬ ತಾಲೂಕು ಕುಬಟೂರು ಗ್ರಾಮದ ಶ್ರೀ ದ್ಯಾಮವ್ವ ದೇವಿ ಜಾತ್ರೆ ನಡೆಯುತ್ತಿದೆ. ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕುಟುಂಬದ ಸಹಿತ ಪಾಲ್ಗೊಂಡಿದ್ದರು. ಪ್ರತ್ಯೇಕವಾಗಿ ದೇವರಿಗೆ ಪೂಜೆ ಸಲ್ಲಿಸಿ, ಜನರೊಂದಿಗೆ ಬೆರೆತು ಜಾತ್ರೆ ಮಾಡಿದರು.
ರಥೋತ್ಸವದ ವೇಳೆ ‘ಅಶ್ವಮೇಧ’
ಶ್ರೀ ದ್ಯಾಮವ್ವ ದೇವಿ ರಥೋತ್ಸವದ ವೇಳೆ ಶಾಸಕ ಕುಮಾರ್ ಬಂಗಾರಪ್ಪ ಅವರು ಮೈಕ್ ಹಿಡಿದು ಹಾಡು ಹೇಳಿದರು. ಇದು ಜನರ ಗಮನ ಸೆಳೆಯಿತು. ಕುಮಾರ್ ಬಂಗಾರಪ್ಪ ಅವರು ನಟಿಸಿದ್ದ ಅಶ್ವಮೇಧ ಸಿನಿಮಾದ ಹೃದಯ ಸಮುದ್ರ ಕಲಕಿ ಹಾಡು ಹೇಳಿದರು. ಶಾಸಕರು ಹಾಡು ಹೇಳುತ್ತಿದ್ದಂತೆ ಊರಿನ ಕೆಲವರು ಧ್ವನಿ ಗೂಡಿಸಿದರು. ಕೆಲವರು ಹೆಜ್ಜೆ ಹಾಕಿದರು. (MLA Song)
ಡೊಳ್ಳು ಕಟ್ಟಿದ ಮಧು
ಇನ್ನು, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಡೊಳ್ಳು ಭಾರಿಸಿದರು. ಡೊಳ್ಳು ಕಲಾವಿದರಿಂದ ಡೊಳ್ಳು ಪಡೆದು, ಕಟ್ಟಿಕೊಂಡು ಹೆಜ್ಜೆ ಹಾಕಿದರು. ಮಧು ಬಂಗಾರಪ್ಪ ಡೊಳ್ಳು ಭಾರಿಸುವುದನ್ನು ಊರಿನ ಜನರು ಗುಂಪುಗೂಡಿ ನೋಡಿದರು. ಇನ್ನು, ಊರಿನ ಮಕ್ಕಳೊಂದಿಗೆ ಹಾಡಿಗೆ ಮಧು ಬಂಗಾರಪ್ಪ ಡಾನ್ಸ್ ಮಾಡಿದರು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ಕುರಿತು ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ

CLICK HERE TO JOIN SHIVAMOGGA LIVE WHATSAPP GROUP




