ಸೊರಬ: ಪೆಟ್ರೋಲ್ ಬಂಕ್‌ವೊಂದರ ಮುಂಭಾಗ ನಿಲ್ಲಿಸಿದ್ದ ಲಾರಿ (Truck) ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನುಕೇರಿ ಬಡಾವಣೆ ನಿವಾಸಿ ಇಬ್ರಾಹಿಂ ಅಹಮ್ಮದ್ (26) ಬಂಧಿತ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಸೊರಬ ಪಟ್ಟಣದ ಪೆಟ್ರೋಲ್ ಬಂಕ್ ಮುಂಭಾಗ ಸಾಗರ ಪಟ್ಟಣದ ಗಾಂಧಿನಗರ ನಿವಾಸಿ ಆರೀಫ್ ಆಹ್ಮದ್ ಎಂಬುವರಿಗೆ ಸೇರಿದ ಲಾರಿ ಕಳ್ಳತನವಾಗಿತ್ತು. ಇದರ ಸಿಸಿಟಿವಿ ವಿಡಿಯೋಗಳು ವೈರಲ್ ಆಗಿದ್ದವು. ಕಳ್ಳತನದ ಬಗ್ಗೆ ದೂರು ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಪಟ್ಟಣದ ಇಬ್ರಾಹಿಂ ಅಹಮ್ಮದ್‌ನನ್ನು ಬಂಧಿಸಿ, ಸುಮಾರು ₹4.90 ಲಕ್ಷದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಪಿಐ ಮಹಾಂತೇಶ ಕೆ.ಲಂಬಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಎಂ.ಹೆಚ್.ನವೀನ್ ನೇತೃತ್ವದಲ್ಲಿ ಸಿಬ್ಬಂದಿ ರಾಘವೇಂದ್ರ, ವಿನಯ್, ಲೋಕೇಶ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ, ಇವತ್ತು ಮಳೆಯಾಗುತ್ತಾ? – ಹವಾಮಾನ ವರದಿ
Truck
LATEST NEWS
- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

About The Editor
ನಿತಿನ್ ಆರ್.ಕೈದೊಟ್ಲು






