NEWS HIGHLIGHTS
ಸೊರಬ: ಇಲ್ಲಿನ ರಂಗನಾಥ ಸ್ವಾಮಿ ದೇವಸ್ಥಾನದ ಮುಂದೆ ನಿಲ್ಲಿಸಿದ್ದ (Parked) ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತು ಉರಿದಿದೆ. ಸೊರಬದ ಸುಭಾಷ್ ನಗರದ ರಾಜಶೇಖರಯ್ಯ ಹಿರೇಮಠ ಅವರಿಗೆ ಸೇರಿದ ಕಾರು ಸುಟ್ಟು ಕರಕಲಾಗಿದೆ.
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.ರಾಜಶೇಖರಯ್ಯ ಅವರು ತಮ್ಮ ಮನೆಯಿಂದ ಬಂದು ಕಾರು ನಿಲ್ಲಿಸಿದ್ದರು. ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ಅಗ್ನಿಶಾಮಕ ಸಿಬ್ಬಂದಿ ಕೂಡ ಬೆಂಕಿ ನಂದಿಸಲು ಯತ್ನಿಸುವ ಹೊತ್ತಿಗಾಗಲೆ ಕಾರು ಸಂಪೂರ್ಣ ಸುಟ್ಟು ಹೋಗಿತ್ತು ಎಂದು ತಿಳಿದು ಬಂದಿದೆ. (ಮತ್ತಷ್ಟು ಸುದ್ದಿ ಕೆಳಗಿದೆ)


ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ. ಕಾರು ಸಂಪೂರ್ಣ ಸುಟ್ಟು ಹೋಗಿದೆ.

ಇದನ್ನೂ ಓದಿ » ಮಾಲೀಕನ ಮನೆಗೆ ಹೋಗಿದ್ದ ಕೆಲಸದ ಹುಡುಗ ಹಿಂತಿರುಗಲೇ ಇಲ್ಲ, ಪರಿಶೀಲಿಸಿದಾಗ ಮಾಲೀಕನಿಗೆ ಬಿಗ್ ಶಾಕ್

