SHIVAMOGGA LIVE NEWS | 27 DECEMBER 2023
ANAVATTI : ಮಲೆನಾಡು ಭಾಗದ ರೈತರ ಜಾನಪದ ಕ್ರೀಡೆ ಹೋರಿ ಹಬ್ಬವನ್ನು ಅದ್ಧೂರಿಯಾಗಿ ನಡೆಸಲಾಯಿತು. ಸೊರಬ ತಾಲೂಕು ಆನವಟ್ಟಿಯಲ್ಲಿ ರಾಜ್ಯಮಟ್ಟದ ಹೋರಿ ಹಬ್ಬ ನಡೆಯಿತು.
![]() |
ದುರ್ಗಾಂಬಾ ಗೆಳೆಯರ ಬಳಗದ ವತಿಯಿಂದ ಸೋಮವಾರ ರಾಜ್ಯ ಮಟ್ಟದ ಹೋರಿ ಹಬ್ಬ ಆಯೋಜಿಸಲಾಗಿತ್ತು. ಇದನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯ ಜನ ಸೇರಿದ್ದರು.
ದೇವತೆಗಳು, ಅಖಾಡಕ್ಕೆ ಪೂಜೆ
ಆನವಟ್ಟಿಯ ಮುಖಂಡರಾದ ಚೌಟಿ ಚಂದ್ರಶೇಖರ್ ಪಾಟೀಲ್, ಶ್ರೀನಾಥ ಮಡ್ಡಿ ರಾಜ್ಯ ಮಟ್ಟದ ಹೋರಿ ಹಬ್ಬಕ್ಕೆ ಭೂಮಿ, ಗ್ರಾಮ ದೇವತೆಗಳು ಮತ್ತು ಹೋರಿ ಅಖಾಡಕ್ಕೆ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.
ಅಲಂಕೃತಗೊಂಡ ಹೋರಿಗಳು
ಹೋರಿ ಹಬ್ಬಕ್ಕೆಂದೇ ಸಜ್ಜುಗೊಳಿಸಿದ್ದ ಪೀಪಿ ಹೋರಿಗಳು ವಿವಿಧ ಹೂಗಳು, ಬಣ್ಣ-ಬಣ್ಣದ ಟೇಪ್, ಕೊಬ್ಬರಿ ಹಾರ, ಬಲೂನ್‌ಗಳಿಂದ ನೋಡುಗರನ್ನು ಸೆಳೆದವು. ಸ್ಥಳೀಯ ಹೋರಿಗಳನ್ನು ಆದ್ಯತೆ ಮೇರೆಗೆ ಅಖಾಡದಲ್ಲಿ ಬೆದರಿಸಲಾಯಿತು.
ಇದನ್ನೂ ಓದಿ – ಮಹಿಳೆಯರಿಗೆ ಗುಡ್ ನ್ಯೂಸ್, ಗ್ರಾಮ ಪಂಚಾಯಿತಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಕ್ಯಾಂಪ್, ಯಾವಾಗ?
ಹಿಂದೂ ಹುಲಿ, ಬೇಟೆಗಾರ, ಅಗಸ್ತ್ಯ, ದೊರೆ, ಕೊಲೆಗಾರ, ಹಿಟ್ಲರ್, ನಾಯ್ಕರ್ ಗೂಳಿ, ರಾಣೇಬೆನ್ನೂರ್ ಕಾ ರಾಜಾ, ಹಿಂದೂ ಹುಲಿ, ಆರ್ಮಿ ಹುಲಿ, ಚಿನ್ನಾಟದ ಚೆಲುವ, ನಂದಿ ಎಕ್ಸ್‌ಪ್ರೆಸ್, ದೇವರ ಮಗ ಹೋರಿಗಳು ನೆರೆದಿದ್ದವರ ಗಮನ ಸೆಳೆದವು. ಶಿಕಾರಿಪುರ, ಬ್ಯಾಡಗಿ, ಹಾವೇರಿ, ಕೋಲಾರ, ಶಿವಮೊಗ್ಗ, ದಾವಣಗೆರೆ, ರಾಮನಗರ ಸೇರಿ ರಾಜ್ಯದ ವಿವಿಧೆಡೆಯಿಂದ ಸೇರಿ 300ಕ್ಕೂ ಹೆಚ್ಚು ಪೀಪಿ ಹೋರಿಗಳು ಹಬ್ಬಕ್ಕೆ ಆಗಮಿಸಿದ್ದವು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200