ಭಾರಿ ಮಳೆಯಾಗುತ್ತಿದ್ದರೂ ಸೊರಬದ ಈ ವಾರ್ಡ್ ಜನರು ಟ್ಯಾಂಕರ್ ನೀರಿಗೆ ಕಾಯಬೇಕು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SORABA NEWS | 16 JUNE 2021

ಭಾರಿ ಮಳೆಯಾಗುತ್ತಿದ್ದರೂ ಈ ಏರಿಯಾದ ಜನರು ಟ್ಯಾಂಕರ್‍ ನೀರಿಗೆ ಕಾದು ಕೂರುವಂತಾಗಿದೆ. ಸೊರಬ ಪಟ್ಟಣದ 10ನೇ ವಾರ್ಡ್‍ ನಿವಾಸಿಗಳು ಈ ದುಸ್ಥಿತಿ ಇದೆ.

ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಆದರೆ, 10 ನೇ ವಾರ್ಡ್ ನಿವಾಸಿಗಳು ಕುಡಿಯುವ ನೀರಿಗೆ ಪುರಸಭೆಯಿಂದ ಪೂರೈಸುತ್ತಿರುವ ಟ್ಯಾಂಕರ್ ನೀರಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿರುವುದು ದುರ್ದೈವ.

ಓಂ ಶಾಂತಿ ರಸ್ತೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಮಾರ್ಕೆಟ್ ರಸ್ತೆಯ ಮನೆಗಳಿಗೆ ನೀರು ಪೂರೈಸುವ ಕೊಳವೆ ಬಾವಿಯ ಮೊಟರ್ ಕೆಟ್ಟು ಸುಮಾರು ಐದಾರು ದಿನಗಳಾಗಿದೆ. ಆದರೆ, ಇಲ್ಲಿಯವರೆಗೂ ಮೊಟರ್ ರಿಪೇರಿ ಕಾರ್ಯಕ್ಕೆ ಸ್ಥಳೀಯ ಆಡಳಿತ ಮುಂದಾಗಿಲ್ಲ ಎಂಬುದು ನಿವಾಸಿಗಳ ಆರೋಪ.

10 ನೇ ವಾರ್ಡ್ ನಲ್ಲಿರುವ ಕೊಳವೆ ಬಾವಿಯಿಂದ 8, 9 ಮತ್ತು 10 ವಾರ್ಡ್ ಗೆ ನೀರು ಪೂರೈಸಲಾಗುತ್ತಿದೆ. ಕಳೆದ ಆರೇಳು ವರ್ಷದಿಂದ ಕೊಳವೆ ಬಾವಿಯ ಮೊಟರ್ ಕೆಟ್ಟ ಉದಾಹರಣೆ ಇಲ್ಲ. ಶೀಘ್ರದಲ್ಲಿಯೇ ಮೋಟರ್ ದುರಸ್ತಿಗೊಳಿಸಲಾಗುವುದು ಎನ್ನುತ್ತಾರೆ ಪುರಸಭೆ 10 ನೇ ವಾರ್ಡ್ ನ ಸದಸ್ಯೆ ಸುಲ್ತಾನ ಬೇಗಂ.

ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.

189146674 1131587070654535 9127287656608744677 n.jpg? nc cat=107&ccb=1 3& nc sid=8bfeb9& nc ohc=Jmr3WxJAjjEAX i1r8l& nc ht=scontent.fblr1 3

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 16, 2021

Leave a Comment