ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಸೊರಬ: ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 7 ಕಡೆ ದೇವಸ್ಥಾನಗಳಲ್ಲಿನ ಕಳ್ಳತನ (Temple) ಪ್ರಕರಣ ಬಯಲಿಗೆ ಬಂದಿದೆ. ಈತನಿಂದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸವಳಂಗದ ಅಯ್ಯಪ್ಪ ನಗರದ ಸಂದೀಪ.ಕೆ (24) ಬಂಧಿತ. ಸೊರಬದ ಪುರಸಭೆ ವೃತ್ತದಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರನ್ನು ಕಂಡು ಸಂದೀಪ ಪರಾರಿಯಾಗಲು ಯತ್ನಿಸಿದ. ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸೊರಬ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಎಲ್ಲೆಲ್ಲಿ ಕಳ್ಳತನ ಮಾಡಿದ್ದ?
ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಕಡಸೂರು ಗ್ರಾಮದ ಶ್ರೀ ಮಾರಿಕಾಂಬ ದೇವಸ್ಥಾನ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಯಲಕುಂದ್ಲಿ ಗ್ರಾಮದ ಶ್ರೀ ರಾಚಮ್ಮ ದೇವಸ್ಥಾನ, ದಿಗಟೆಕೊಪ್ಪ ಗ್ರಾಮದ ಚೌಡಮ್ಮ ದೇವಸ್ಥಾನ, ಶಿರೂರು-ಆಲಳ್ಳಿ ಗ್ರಾಮದ ಯಕ್ಷಾಂಬ ದೇವಸ್ಥಾನ, ಬಲೆಗಾರು ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನ, ಮರತ್ತೂರು ಗ್ರಾಮದ ದುರ್ಗಮ್ಮ ದೇವಸ್ಥಾನ ಹಾಗೂ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ಕೋಟೇಶ್ವರ ದೇವಸ್ಥಾನಗಳ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ.
7 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ₹4 ಲಕ್ಷ ಮೌಲ್ಯದ 36 ಗ್ರಾಂ ಬಂಗಾರದ ಒಡವೆ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಿಎಸ್‌ಐ ನವೀನ್.ಎಂ.ಹೆಚ್, ನಾಗೇಶ, ರಾಘವೇಂದ್ರ, ಲೋಕೇಶ್, ವಿನಯ, ಗಿರೀಶ್, ಹನುಮಂತ, ರಾಜುನಾಯ್ಕ, ಮಲ್ಲೇಶ, ಶಶಿಧರ, ಸಂದೀಪ, ಸೋಮಶೇಖರ, ಮೋಹನ, ರವೀಂದ್ರ, ಹೇಮಲತಾ, ರೂಪಾಲಿ ಕಾರ್ಯಾಚರಣೆಯಲ್ಲ ಪಾಲ್ಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ವಾಹನ ಸವಾರರಿಗೆ ಗುಲಾಬಿ ಹೂವು ನೀಡಿದ ಪೊಲೀಸರು
Temple






