ವರದಾ ನದಿಯಲ್ಲಿ ಮೃತದೇಹ ಪತ್ತೆ, ಕೈ ಮೇಲಿದೆ ಹಚ್ಚೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 1 AUGUST 2023

ANAVATTI : ವರದಾ ನದಿಯಲ್ಲಿ (Varada River) ಮೃತದೇಹ ಪತ್ತೆಯಾಗಿದೆ. ಮೃತನ ಕೈ ಮೇಲೆ ಹೃದಯ ಮತ್ತು ವಿ.ಆರ್‌. ಅಕ್ಷರಗಳ ಹಚ್ಚೆ ಇದೆ.

ಸೊರಬ ತಾಲೂಕು ಆನವಟ್ಟಿ ಸಮೀಪದ ಬಂಕಸಾಣ – ಮೂಗೂರು ಗ್ರಾಮದ ಬಳಿ ಮೃತದೇಹ ಸಿಕ್ಕಿದೆ. ವರದಾ ನದಿಯಲ್ಲಿ ಮೃತದೇಹ ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದು ಅದೇ ಮೃತದೇಹ ಇರಬಹುದು ಎಂದು ಶಂಕಿಸಲಾಗಿದೆ.

PARISHRAMA NEET ACADEMY

ವಾರದ ಹಿಂದೆ ಈ ವ್ಯಕ್ತಿ ನದಿಗೆ (Varada River) ಬಿದ್ದಿರುವ ಸಾಧ್ಯತೆ ಇದೆ ಎಂದು ಅನುಮಾನಿಸಲಾಗಿದೆ. ನೀರಿನ ಹರಿವು ಕಡಿಮೆಯಾಗಿರುವುದರಿಂದ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯ ಗುರುತು ಬಲ್ಲವರು ಆನವಟ್ಟಿ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪಿಎಸ್‌ಐ ರಾಜು ರೆಡ್ಡಿ ತಿಳಿಸಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment