ಮಾಜಿ ಮಿನಿಸ್ಟರ್‌ ವಿರುದ್ಧ ಅಶ್ಲೀಲ ಕಮೆಂಟ್‌, ತೀರ್ಥಹಳ್ಳಿಯಲ್ಲಿ ಕಂಪ್ಲೇಂಟ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ತೀರ್ಥಹಳ್ಳಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಐಎನ್‌ಟಿಯುಸಿ ಅಧ್ಯಕ್ಷ ಪ್ರೇಮಚಂದ್ರ ನೇತೃತ್ವದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಮಾಜಿ ಸಚಿವರ ಸಂದರ್ಶನದ ವಿಡಿಯೊ ತುಣುಕೊಂದಕ್ಕೆ ಗಣೇಶ್ ಎಂಬುವವರು ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿ ವಿರುದ್ಧ ಸೈಬರ್ ಕ್ರೈಂ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತಕ್ಷಣವೇ ಬಂಧಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

THIRTHAHALLI-NEWS-GRAPHICS-BY-SHIVAMOGGA-LIVE

ಈ ಸಂದರ್ಭ ಯುವ ಕಾಂಗ್ರೆಸ್ ಮುಖಂಡರಾದ ರವೀಶ್ ಹೊಸ್ಕೆರೆ, ಶ್ರೇಯಸ್ ರಾವ್, ಜಯಕರ ಶೆಟ್ಟಿ, ಪಣಿರಾಜ್ ಕಟ್ಟೇಹಕ್ಕಲು, ಪ್ರಶಾಂತ್ ಸಾಲಿಯಾನ, ಸಂದೀಪ ಹಾಗೂ ಮಹೇಂದ್ರ ಉಪಸ್ಥಿತರಿದ್ದರು.