ಮಾಳೂರು ತಿರುವಿನಲ್ಲಿ ಅಪಘಾತ, ಬೈಕ್‌ ಜಖಂ, ಶಿವಮೊಗ್ಗ ವಿದ್ಯಾನಗರದ ವ್ಯಕ್ತಿಗೆ ಗಾಯ, ಹೇಗಾಯ್ತು ಘಟನೆ?

 ಶಿವಮೊಗ್ಗ  LIVE 

ತೀರ್ಥಹಳ್ಳಿ: ಮಾಳೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬೈಕ್ ಮತ್ತು ಬಸ್ಸಿನ ನಡುವೆ ಅಪಘಾತ (Accident) ಸಂಭವಿಸಿದ್ದು ಶಿವಮೊಗ್ಗದ ವಿದ್ಯಾನಗರದ ವ್ಯಕ್ತಿ ಸೇರಿ ಮೂವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ » ₹1.20 ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ?

ವಿದ್ಯಾನಗರದ ಪುಟ್ಟಮರಪ್ಪ, ಮಂಜುನಾಥ್‌ ಮತ್ತು ಡಿ.ಮಂಜುನಾಥ್‌ ಗಾಯಗೊಂಡವರು. ಸಕ್ರೇಬೈಲಿಗೆ ಊಟಕ್ಕೆ ಹೋಗಿ ಮೂವರು ಮಾಳೂರಿನ ತನಕ ಹೋಗಿ ಅಲ್ಲಿಂದ ಶಿವಮೊಗ್ಗಕ್ಕೆ ವಾಪಸ್ ಬರುತ್ತಿದ್ದಾಗ ಘಟನೆ ನಡೆದಿದೆ.

ಸ್ಪ್ಲೆಂಡರ್‌ ಬೈಕ್‌ನಲ್ಲಿ ಮೂವರು ಬರುತ್ತಿದ್ದಾಗ ಮಾಳೂರಿನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ತಿರುವಿನಲ್ಲಿ ಅಪಘಾತವಾಗಿದೆ. ಶಿವಮೊಗ್ಗ ಕಡೆಯಿಂದ ಬಂದ ಖಾಸಗಿ ಬಸ್ ಅತಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಬೈಕ್‌ನಲ್ಲಿದ್ದ ಮೂವರೂ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಮತ್ತು ಬೈಕ್‌ನ ಮುಂಭಾಗ ಜಖಂ ಆಗಿದೆ ಎಂದು ಆರೋಪಿಸಲಾಗಿದೆ. ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment