ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI | 15 ಜನವರಿ 2020
ಬೆಜವಳ್ಳಿಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಉತ್ಸವ ಅದ್ದೂರಿಯಾಗಿ ನಡೆಯಿತು. ಅಯ್ಯಪ್ಪ ಸ್ವಾಮಿಗೆ ಆಭರಣ ಹಾಗೂ ಗಣ ಪರಿವಾರ ದೈವಗಳ ಸಮೇತ ಪಟ್ಟದ ಆಯುಧಗಳ ಉತ್ಸವ ಗುರುಮನೆಯಿಂದ ಹೊರತರುತ್ತಿದ್ದಂತೆ ಆಗಸದಲ್ಲಿ ಗರುಡ ಪಕ್ಷಿಗಳ ದರ್ಶನವಾಯಿತು. ಈ ವೇಳೆ ಅಯ್ಯಪ್ಪ ಭಕ್ತರಿಂದ ದೇವರ ಸ್ಮರಣೆ ನಡೆಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಆಭರಣವನ್ನು ದೇವರ ಸನ್ನಿಧಾನಕ್ಕೆ ತರಲಾಯಿತು. ಮುಂಜಾನೆ ಗಣಪತಿ ಪೂಜೆಯೊಂದಿಗೆ ಹೋಮ ಹವನ, ಕಲಶ ಸ್ಥಾಪನೆಯೊಂದಿಗೆ ಮಕರ ಸಂಕ್ರಾಂತಿ ಉತ್ಸವಕ್ಕೆ ಚಾಲನೆ ದೊರೆಯಿತು. ಶ್ರೀ ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಪೀಠಾರೋಹಣದ ವರ್ಧಂತಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಕದಲಿ ಮಂಟಪದಲ್ಲಿ ರಾಜ ಪಲ್ಲಕ್ಕಿಯ ಮಹಾಪೂಜೆ, ಹರಕೆ ತುಲಾಭಾರ ಸೇವೆ, ಬ್ರಹ್ಮಕಲಶ ಸ್ಥಾಪನೆ, ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಗೆ ಮಹಾ ಮಂಗಳಾರತಿ, ಅಯ್ಯಪ್ಪ ಸ್ವಾಮಿ ಉಯ್ಯಾಲೆ ಸೇವೆ, ಕನಕಾಭಿಷೇಕ, ಮಹಾಕಲಶ ಕುಂಭಾಭಿಷೇಕ, ಮಹಾ ಮಂಗಳಾರತಿ ಮುಂತಾದ ಧಾರ್ಮಿಕ ಆಚರಣೆಗಳು ನೆರವೇರಿದವು.
ಆಭರಣಗಳ ಪೆಟ್ಟಿಗೆ ಮುಟ್ಟಿ ನಮಸ್ಕರಿಸಿದ ಅಯ್ಯಪ್ಪ ಸ್ವಾಮಿ ಭಕ್ತರು ಇಷ್ಟಾರ್ಥಗಳ ಈಡೇರಿಸುವಂತೆ ಪ್ರಾರ್ಥಿಸಿದರು. ಡೊಳ್ಳು ಕುಣಿತ, ಹುಲಿ ಕುಣಿತದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಭರಣ ಉತ್ಸವ ನಡೆಯಿತು. ಶ್ರೀ ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]