ಕೆಎಫ್‌ಡಿ ಸೋಂಕು, ತೀರ್ಥಹಳ್ಳಿಯ ಬಾಲಕ ಮಣಿಪಾಲದಲ್ಲಿ ಸಾವು

ತೀರ್ಥಹಳ್ಳಿ : ಮಂಗನ ಕಾಯಿಲೆಗೆ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ – KFD) ತುತ್ತಾಗಿದ್ದ ಎಂಟು ವರ್ಷದ ಬಾಲಕ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾನೆ. ತೀರ್ಥಹಳ್ಳಿಯ ದತ್ತರಾಜಪುರ ಗ್ರಾಮದ ಯುವಕ ಚಿಕಿತ್ಸೆ ಫಲಕಾರಿಯಾಗಿದೆ ಮಣಿಪಾಲ ಆಸ್ಪತ್ರೆ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ » ಬೆಳಗ್ಗೆ ಜಮೀನಿಗೆ ಬಂದ ಮಾಲೀಕರಿಗೆ ಕಾದಿತ್ತು ಶಾಕ್‌, ಆಗಿದ್ದೇನು?

ರಚಿತ್‌ ಮೃತ ಬಾಲಕ. ರಚಿತ್‌ ಮತ್ತು ಆತನ ಅಕ್ಕನಿಗೆ ಮಂಗನ ಕಾಯಿಲೆ ದೃಢವಾಗಿತ್ತು. ಇಬ್ಬರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಾಲ್ಕು ದಿನ ಚಿಕಿತ್ಸೆ ಬಳಿಕ ರಚಿತ್‌ನನ್ನು ಮಣಿಪಾಲದ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. 12 ದಿನ ಚಿಕಿತ್ಸೆ ಪಡೆದ ರಚಿನ್‌ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ.

ರಚಿತ್‌, ದತ್ತರಾಜಪುರದ ರಾಮು ಮತ್ತು ಸವಿತಾ ದಂಪತಿಯ ಪುತ್ರ. ಇಲ್ಲಿನ ಶಾಲೆಯೊಂದರಲ್ಲಿ ಆತನ 2ನೇ ತರಗತಿ ಓದುತ್ತಿದ್ದ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
Thirthahalli-News-Update

Leave a Comment