ಹೆದ್ದಾರಿಗೆ ಅಡ್ಡಲಾಗಿ ಉರುಳಿದ ಮರ, ತೀರ್ಥಹಳ್ಳಿ – ಉಡುಪಿ ಮಾರ್ಗದಲ್ಲಿ ಕೆಲ ಕಾಲ ಟ್ರಾಫಿಕ್‌ ಜಾಮ್

ಶಿವಮೊಗ್ಗ ಲೈವ್‌.ಕಾಂ | ತೀರ್ಥಹಳ್ಳಿ

ಶಿವಮೊಗ್ಗ-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸಮೀಪದ ಕೋಳಿಗೆ ಬಳಿ ಘಟನೆ ನಡೆದಿದೆ.

Tree-Falls-on-highway-Road-in-kolige-near-megharavalli-in-Thirthahalli-taluk

ರಾಷ್ಟ್ರೀಯ ಹೆದ್ದಾರಿ 169A ರಸ್ತೆಗೆ ಮರ ಬಿದ್ದ ಕಾರಣ ಸುಮಾರು 1 ಗಂಟೆಗೂ ಹೆಚ್ಚು ಕಾಲ ವಾಹನ ದಟ್ಟಣೆ ಉಂಟಾಗಿತ್ತು. ರಸ್ತೆಯ ಎರಡೂ ಕಡೆಗಳಲ್ಲಿ ಸುಮಾರು 3 ಕಿ.ಮೀ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್‌ನಲ್ಲಿ ಬಸ್, ಕಾರು ಹಾಗೂ ಆ್ಯಂಬುಲೆನ್ಸ್ ಸೇರಿ ಹಲವು ವಾಹನಗಳು ಸಿಲುಕಿದ್ದವು.

ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ಸ್ಥಳೀಯರಾದ ನಾಲೂರು ಗ್ರಾಮದ ಮುರಳಿ ಭಟ್, ಶಿವು ಭಟ್ ಹಾಗೂ ರಾಜೇಶ್ ಬಿಳುಮನೆ ಅವರ ತಂಡ ಮರವನ್ನು ಕಟಾವು ಮಾಡಿ ತೆರವುಗೊಳಿಸಿದರು. ಹಾಗಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನಃ ಆರಂಭವಾಗಿದೆ.