ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 9 ಸೆಪ್ಟಂಬರ್ 2020
ಗ್ರಾಮದ ಸ್ವಚ್ಛತೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೋಮು ಸೌಹಾರ್ದತೆಗೆ ಹೆಸರಾಗಿರುವ ಹಣಗೆರೆ ಕಟ್ಟೆಯಲ್ಲಿ ಈ ಘಟನೆ ಸಂಭವಿಸಿದೆ.
ಗಲಾಟೆಗೆ ಕಾರಣವೇನು?
ಹಣಗೆರೆ ಕಟ್ಟೆಗೆ ವನ್ಯಜೀವಿ ವಿಭಾಗದ ಡಿಸಿಎಫ್ ಐ.ಎಂ.ನಾಗರಾಜ್ ಅವರು ಭೇಟಿ ನೀಡಿದ್ದರು. ಪರಿಸರ ಹಾನಿ ಮತ್ತು ಅತಿಕ್ರಮ ವಿಚಾರವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ವಚ್ಛತೆ ವಿಚಾರವಾಗಿ ಈ ಗಲಾಟೆಯಾಗಿದೆ.
ಸ್ವಚ್ಛತೆ ವಿಚಾರವಾಗಿ ಗಲಾಟೆ ಏಕೆ?
ಹಣಗೆರೆ ಕಟ್ಟೆಯ ಧಾರ್ಮಿಕ ಕ್ಷೇತ್ರಕ್ಕೆ ಬರುವವರು ಪ್ರಾಣಿಬಲಿ ನೀಡಿ, ಅಲ್ಲಿಯೇ ಅಡುಗೆ ಮಾಡಿ, ಕಸ ಸುರಿಯುತ್ತಾರೆ. ಕೆಲವು ಪ್ರವಾಸಿಗರು ಮದ್ಯಪಾನ ಮಾಡಿ ಬಾಟಿಲಿಗಳನ್ನು ಎಸೆಯುತ್ತಿದ್ದಾರೆ. ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯದಿಂದಾಗಿ ದುರ್ವಾಸನೆ ಹೆಚ್ಚುತ್ತಿದೆ.
ಗ್ರಾಮಸ್ಥರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಗ್ರಾಮಸ್ಥರ ಒಂದು ಗುಂಪು ಅರಣ್ಯ ವ್ಯಾಪ್ತಿಯಲ್ಲಿ ಅಡುಗೆ ಮಾಡಲು, ಪ್ರಾಣಿಬಲಿ ಸೇರಿದಂತೆ ಯಾವುದೇ ಚಟುವಟಿಕೆ ನಡೆಸದಂತೆ ಮನವಿ ಮಾಡಿತು. ಮತ್ತೊಂದು ಗುಂಪು ಧಾರ್ಮಿಕ ಕ್ಷೇತ್ರದಲ್ಲಿನ ಆಚರಣೆಗೆ ತಡೆ ನೀಡದಂತೆ ಒತ್ತಾಯಿಸಿತು. ಈ ವೇಳೆ ಗಲಾಟೆಯಾಗಿದೆ.
ಲಘು ಲಾಠಿ ಚಾರ್ಜ್, ಎಚ್ಚರಿಕೆ
ಗುಂಪು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ಬಳಿಕ ಕೆಲವರು ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಅರಣ್ಯ ವ್ಯಾಪ್ತಿಯಲ್ಲಿ ಅತಿಕ್ರಮ, ಅಕ್ರಮ ಚಟುವಟಿಕೆಗೆ ನಿರ್ಬಂಧವಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಎಫ್ಒ ಐ.ಎಂ.ನಾಗರಾಜ್ ಎಚ್ಚರಿಕೆ ನೀಡಿದರು.
ಸಿರಿಗೆರೆ ವನ್ಯಜೀವಿ ವಿಭಾಗದ ಆರ್ಎಫ್ಓ, ಮಾಳೂರು ಪಿಎಸ್ಐ ತಿಮ್ಮಪ್ಪ, ಹಣಗೆರೆ ಮತ್ತು ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖರು ಇದ್ದರು.
https://www.facebook.com/liveshivamogga/videos/314546413130946/?t=1
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422