ಅಡಿಕೆ ಮರ ಬಿದ್ದು ದ್ವಿಚಕ್ರ ವಾಹನ ಸವಾರ ಸಾವು, ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ತೀರ್ಥಹಳ್ಳಿ: ತೋಟದಲ್ಲಿ ಒಣಗಿದ್ದ ಅಡಕೆ ಮರವನ್ನು ಕಡಿದು ಉರುಳಿಸುವಾಗ ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಸರ – ಕರ್ಕಿ – ಬಾಳಗಾರು ಮಾರ್ಗದ ಅಬ್ಬಿಗದ್ದೆ ಸಮೀಪ ಘಟನೆ ಸಂಭವಿಸಿದೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಮೃತರನ್ನು ತೀರ್ಥಹಳ್ಳಿ ಗಾಂಧಿನಗರ ನಿವಾಸಿ ಮಾಯಾಕಣ್ಣನ್ (50) ಎಂದು ಗುರುತಿಸಲಾಗಿದೆ. ಮಾಯಾಕಣ್ಣನ್ ರೈತರೊಬ್ಬರಿಗೆ ಪೂರೈಸಿದ್ದ ಕಲ್ಲು ಸಾಮಗ್ರಿ ಹಣ ಪಡೆದು ಮರಳುತ್ತಿದ್ದಾಗ. ತೋಟದ ಕಾರ್ಮಿಕರು ಒಣಗಿದ್ದ ಅಡಿಕೆ ಮರವನ್ನು ಕಡಿದು ಉರುಳಿಸಿದ್ದು, ಅದು ರಸ್ತೆ ಮೇಲೆ ಬಿದ್ದಿದೆ. ಈ ವೇಳೆ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thirrthahalli Taluk Graphics