ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿ ಇವತ್ತು ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿ, ಚಿರತೆ ಉಗುರು ಮತ್ತು ಆನೆ ದಂತ ಮಾರಾಟ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೇಸ್ 1 | ಆನೆ ದಂತ ಮಾರಾಟಕ್ಕೆ ಯತ್ನಿಸಿದವರು ಅರೆಸ್ಟ್
ಆನೆ ದಂತ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಬಂಧಿತರು ಚಿಕ್ಕಮಗಳೂರು ತಾಲೂಕು ನಾಲೂರು ಗ್ರಾಮದ ರಾಜಗೋಪಾಲ ಮತ್ತು ನೆರಟೂರು ಗ್ರಾಮದ ಕೃಷ್ಣಮೂರ್ತಿ ಎಂದು ತಿಳಿದು ಬಂದಿದೆ. ಇವರು ತೀರ್ಥಹಳ್ಳಿ ಪುರಾತನ ಮಠವೊಂದರಲ್ಲಿ ಇದ್ದ ಆನೆ ದಂತ ಕಳವು ಮಾಡಿ, ಮಾರಾಟಕ್ಕೆ ಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ.
ತೀರ್ಥಹಳ್ಳಿ ತಾಲೂಕಿನ ಭೀಮನಕಟ್ಟೆ ಶ್ರೀ ಭೀಮಸೇತು ಮುನಿವೃಂದ ಮಠದಲ್ಲಿದ್ದ ಆನೆ ದಂತ ಕಳುವಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಅರಣ್ಯ ಇಲಾಖೆ ಸಂಚಾರಿ ದಳಕ್ಕೆ ಇಬ್ಬರು ಸಿಕ್ಕಿಬಿದ್ದಿದ್ದಾರೆ.
ಕೇಸ್ 2 | ಚಿರತೆ ಉಗುರು ಮಾರಾಟಗಾರರು ಸಿಕ್ಕಿಬಿದ್ದರು
ಮತ್ತೊಂದು ಪ್ರಕರಣದಲ್ಲಿ ಚಿರತೆ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಅರಣ್ಯ ಇಲಾಖೆ ಸಂಚಾರಿ ದಳ ಅರೆಸ್ಟ್ ಮಾಡಿದೆ. ಸಾಗರ ತಾಲೂಕು ತುಮರಿ ಗ್ರಾಮದಲ್ಲಿ 13 ಚಿರತೆ ಉಗುರು ಮಾರಾಟಕ್ಕೆ ಹೊಂಚು ಹಾಕುತ್ತಿದ್ದ ದೇವರಾಜ, ಉದಯಕುಮಾರ್, ಸುಧಾಕರ ಮತ್ತು ನವೀನ ಎಂಬುವರನ್ನು ಬಂಧಿಸಲಾಗಿದೆ.
ಡಿಸಿಎಫ್ ನಾಗರಾಜ್, ಎಸಿಎಫ್ ಬಾಲಚಂದ್ರ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳಾದ ಸಂಜಯ, ರೇವಣ್ಣ ಸಿದ್ದಯ್ಯ, ಹಿರೇಮಠ, ಹನುಮಂತರಾಯ, ಮಹದೇವ, ಎಲ್ಲಪ್ಪ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]