FATAFAT NEWS, 2 OCTOBER 2024
ಬಸ್, ಕಾರು ಮುಖಾಮುಖಿ ಡಿಕ್ಕಿ
ಆನಂದಪುರ NEWS : ರಾಷ್ಟ್ರೀಯ ಹೆದ್ದಾರಿ–69ರ ಮುಂಬಾಳು ಗ್ರಾಮದ ಮಸೀದಿ ಬಳಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಶಿವಮೊಗ್ಗದಿಂದ ಸಾಗರದ ಕಡೆಗೆ ಹೋಗುತ್ತಿದ್ದ ಬಸ್ ಹಾಗೂ ಸಾಗರದಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಕಾರಿನ ಮುಂಭಾಗ ಬಹುತೇಕ ಜಖಂ ಆಗಿದೆ. ಏರ್ ಬ್ಯಾಗ್ ತೆರೆದಿದ್ದರಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆ
ಆನಂದಪುರ NEWS : ಸಮೀಪದ ಅಂದಾಸುರ ಗ್ರಾಮದಲ್ಲಿ ರೈಲ್ವೆ ಹಳಿ ಪಕ್ಕ ಮಂಗಳವಾರ ಮೃತದೇಹ ಪತ್ತೆಯಾಗಿದೆ. ಮೃತನನ್ನು ದಾವಣಗೆರೆ ಮೂಲದ ಜೆಸಿಬಿ ಚಾಲಕ ಬಸವರಾಜ್ ಎಂದು ಗುರುತಿಸಲಾಗಿದೆ. ರೈಲಿಗೆ ಸಿಲುಕಿದ್ದರೆ ದೇಹ ಛಿದ್ರವಾಗಿರುತ್ತಿತ್ತು. ಆದರೆ ಅಲ್ಪಸ್ವಲ್ಪ ಗಾಯದ ಗುರುತು ಇದೆ. ಹೀಗಾಗಿ ಕೊಲೆ ಶಂಕೆ ವ್ಯಕ್ತವಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾಡುಕೋಣ ತಿವಿತ, ಬೈಕ್ ಸವಾರನಿಗೆ ಗಾಯ
ತೀರ್ಥಹಳ್ಳಿ NEWS : ಮೇಗರವಳ್ಳಿ ಸಮೀಪದ ಅಣ್ಣುವಳ್ಳಿ ಸೇತುವೆ ಬಳಿ ಸೋಮವಾರ ರಾತ್ರಿ ಹೆದ್ದಾರಿಯಲ್ಲಿ ಕಾಡುಕೋಣ ತಿವಿದು ಬೈಕ್ ಸವಾರ ಗಾಯಗೊಂಡಿದ್ದಾನೆ. ಹುಣ್ಣಿಮೆಸರ ವೆಂಕಟೇಶ (50) ಗಾಯಗೊಂಡವರು. ಮೇಗರವಳ್ಳಿಯಿಂದ ಉಂಟೂರುಕಟ್ಟೆ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಡ್ಡ ಬಂದ ಕಾಡುಕೋಣ ತಿವಿದ ರಭಸಕ್ಕೆ ವೆಂಕಟೇಶ ಕಾಲು ಮತ್ತು ಹಲ್ಲುಗಳಿಗೆ ಪೆಟ್ಟು ಬಿದ್ದಿದೆ. ಸ್ಥಳಕ್ಕೆ ಧಾವಿಸಿದ ಮೇಗರವಳ್ಳಿ ಅರಣ್ಯಾಧಿಕಾರಿಗಳು ಅವರನ್ನು ಪಟ್ಟಣದ ಜೆ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ವೆಂಕಟೇಶ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳ್ಳುಳ್ಳಿಗಾಗಿ ಅಧಿಕಾರಿಗಳ ದಾಳಿ, ಸ್ಯಾಂಪಲ್ ಸಂಗ್ರಹ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200