ತೀರ್ಥಹಳ್ಳಿ : ಮೇಲಿನಕುರುವಳ್ಳಿಯ ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ದೀಕ್ಷಾ.ಆರ್ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 599 ಅಂಕ ಗಳಿಸಿ ಪ್ರಥಮ ರ‍್ಯಾಂಕ್ (RANK) ಪಡೆದಿದ್ದಾರೆ.
ಇನ್ನು, ಪ್ರಥಮ ಸ್ಥಾನ (RANK) ಪಡೆದಿರುವ ಕುರಿತು ದೀಕ್ಷಾ.ಆರ್ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದರು.
ದೀಕ್ಷಾ ಜೊತೆಗೆ ಕಿರು ಸಂದರ್ಶನ
» ಅಭ್ಯಾಸ ಹೇಗಿತ್ತು?
ನಾನು ಪ್ರತಿದಿನ ಓದುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಚೆನ್ನಾಗಿ ಕಲಿಸುತ್ತಿದ್ದರು. ಯಾವುದೇ ಡೌಟುಗಳಿದ್ದರು ತಿಳಿಸಿ ಕೊಡುತ್ತಿದ್ದರು. ಅಲ್ಲದೆ ಯು ಟ್ಯೂಬ್‌ನಲ್ಲಿಯು ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತಿದ್ದೆ. ಆದ್ದರಿಂದ ವಿಷಯಗಳು ಹೆಚ್ಚು ಮನದಟ್ಟಾದವು. ಇದು ಪರೀಕ್ಷೆಯಲ್ಲಿ ಅನುಕೂಲವಾಯಿತು.
» ಪೋಷಕರು ಹೇಗೆ ನೆರವಾದರು?
ಪೋಷಕರು ಇಬ್ಬರು ಶಿಕ್ಷಕರು. ಅಪ್ಪ ರಾಘವೇಂದ್ರ ಕಲ್ಕೂರು. ಮೇಗರವಳ್ಳಿ ಶಾಲೆಯಲ್ಲಿ ಶಿಕ್ಷಕ. ತಾಯಿ ಉಷಾ.ವಿ. ತೀರ್ಥಹಳ್ಳಿಯ ಬಾಲಕಿಯ ಪ್ರೌಢಶಾಲೆಯಲ್ಲಿ ಶಿಕ್ಷಕರು. ನನ್ನ ಓದಿಗೆ ಕೊರತೆ ಆಗದಂತೆ ನೋಡಿಕೊಂಡರು. ಅಲ್ಲದೆ ನನ್ನ ಓದಿನ ವಿಚಾರದಲ್ಲಿ ಯಾವುದೇ ಗೊಂದಲ ಉಂಟಾದರು ಅದನ್ನ ಪರಿಹರಿಸುತ್ತಿದ್ದರು.
» ನಿಮ್ಮ ಗುರಿ ಏನು?
ಮುಂದೆ ಇಂಜಿನಿಯರ್ ಆಗಬೇಕು ಎಂಬ ಹಂಬಲವಿದೆ. ಅದರತ್ತ ಗಮನ ಹರಿಸುತ್ತೇನೆ.
ಇದನ್ನೂ ಓದಿ » ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಶಿವಮೊಗ್ಗ ಜಿಲ್ಲೆಗೆ ಎಷ್ಟನೆ ಸ್ಥಾನ? ಇಲ್ಲಿದೆ ರಿಸಲ್ಟ್ ಹೈಲೈಟ್ಸ್

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200