ಭದ್ರಾವತಿಯಿಂದ ತೀರ್ಥಹಳ್ಳಿಗೆ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಯುವಕರು ಅರೆಸ್ಟ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಆಗಸ್ಟ್ 2020

ತೀರ್ಥಹಳ್ಳಿಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಯುವಕರ ತಂಡದ ಮೇಲೆ ಪೊಲೀಸರು ದಾಳಿ ಮಾಡಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಒಂದು ಕೆಜಿ 115 ಗ್ರಾಮ್ ಗಾಂಜಾ ವಶಕ್ಕೆ ಪಡೆಯಲಾಗಿದೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಆರೋಪಿಗಳು ಯಾರು? ಎಲ್ಲಿಯವರು?

ಬಂಧಿತ ಆರೋಪಿಗಳೆಲ್ಲ ಭದ್ರಾವತಿಯವರು ಎಂದು ತಿಳಿದು ಬಂದಿದೆ. ಭದ್ರಾವತಿಯ ಎನ್‍ಎಂಸಿಯ ಅರುಣ್ (26), ಪೇಪರ್ ಟೌನ್‍ನ ರಂಜಿತ್ (23), ಭೋವಿ ಕಾಲೋನಿಯ ಕಿರಣ್ (23), ಪ್ರದೀಪ್ (24) ಬಂಧಿತರು.

ಕಾರಲ್ಲಿ ಬಂದು ಗಾಂಜಾ ಮಾರಾಟ

ಈ ಯುವಕರು ಭದ್ರಾವತಿಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇವರಿಂದ 20 ಸಾವಿರ ಮೌಲ್ಯದ 1 ಕೆಜಿ 115 ಗ್ರಾಂ ಗಾಂಜಾ,  ಒಂದು ಕಾರು, ಐದು ಮೊಬೈಲ್ ಫೋನ್, 6,600 ರೂ. ನಗದು ವಶಕ್ಕೆ ಪಡೆಯಲಾಗಿದೆ.

ತೀರ್ಥಹಳ್ಳಿ ಡಿವೈಎಸ್‍ಪಿ ಡಾ. ಸಂತೋಷ್, ಸಿಪಿಐ ಪ್ರವೀಣ್ ಜಿ ನೀಲಮ್ಮನವರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Comment