ಹೊಸನಗರ, ಸಾಗರದಲ್ಲಿ ಭಾರಿ ಮಳೆ, ಆಗುಂಬೆ ಭಾಗದಲ್ಲಿ ಬಿಡುವು ಕೊಡದ ವರ್ಷಧಾರೆ, ಎಲ್ಲೆಲ್ಲಿ ಜೋರು ಮಳೆಯಾಗ್ತಿದೆ?

ಮಳೆ ವರದಿ: ಜಿಲ್ಲೆಯಲ್ಲಿ ಮೂರು ತಾಲೂಕುಗಳಲ್ಲಿ ಕಳೆದ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ (Heavy Rainfall). ಹೊಸನಗರ, ಸಾಗರ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ತೀರ್ಥಹಳ್ಳಿಯಲ್ಲಿ ಜೋರು ಮಳೆಯಾಗುತ್ತಿದೆ. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

RAIN-REPORT-LOGOಸಾಗರ ತಾಲೂಕಿನ ಕಾಂಡಿಕೆ, ಕಲ್ಮನೆ, ಕೋಳೂರು, ಭೀಮನಕೋಣೆ, ಭೀಮನೇರಿ, ಮಾಲ್ವೆ, ಕೆಳದಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದೆ. ಇತ್ತ ಹೊಸನಗರ ತಾಲೂಕಿನ ಮಾರುತಿಪುರ, ಕೋಡೂರು, ಮುಂಬಾರು, ಮೇಲಿನಬೆಸಿಗೆ, ಹೊಸೂರು ಸಂಪೆಕಟ್ಟೆ ಭಾಗದಲ್ಲಿಯು ಭಾರಿ ಸುರಿಯುತ್ತಿದೆ.

ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ, ಆರಗ, ನೆರಟೂರು, ಹೊಸಹಳ್ಳಿ, ಅರೆಹಳ್ಳಿ, ಹೊನ್ನೇತಾಳು, ಬಿದರಗೋಡು, ಆಗುಂಬೆ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಭಾಂಡ್ಯ ಕುಕ್ಕೆ, ತ್ರಯಂಬಕಪುರ, ತೂದೂರು ಭಾಗದಲ್ಲಿ ಸಾಧಾರಣದಿಂದ ಜೋರು ಮಳೆಯಾಗುತ್ತಿದೆ.

https://chat.whatsapp.com/JPJ0lTQsTKf365Fqu6Q7cd

ಶಾಲೆ, ಕಾಲೇಜುಗಳಿಗೆ ರಜೆ

ಭಾರಿ ಮತ್ತು ನಿರಂತರ ಮಳೆ, ಜೋರು ಗಾಳಿಯ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಹೊಸನಗರ ಮತ್ತು ಸಾಗರ ತಾಲೂಕಿನ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಆಯಾ ತಾಲೂಕಿನ ತಹಶೀಲ್ದಾರ್‌ಗಳು ಆದೇಶಿಸಿದ್ದಾರೆ. ಇನ್ನೊಂದೆಡೆ ಹೊನ್ನೇತಾಳು ಸರ್ಕಾರಿ ಪ್ರಾಥಮಿಕ ಶಾಲೆಗೆ ಎಸ್‌ಡಿಎಂಸಿಯೇ ರಜೆ ಘೋಷಿಸಿದೆ.

ಇದನ್ನೂ ಓದಿ » ಜೋರು ಮಳೆ, ಇವತ್ತು ಎರಡು ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗದಲ್ಲಿ ಶ್ರದ್ಧಾಭಕ್ತಿಯಿಂದ ಮೊಹರಂ ಆಚರಣೆ, ಕೆಂಡ ಹಾಯ್ದು ಭಕ್ತಿ ಸಮರ್ಪಣೆ