ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿ, ಬೈಕ್‌ಗೆ ಡಿಕ್ಕಿ ಹೊಡೆದು ಗೂಡ್ಸ್‌ ವಾಹನ ಎಸ್ಕೇಪ್‌, ಚೇಸ್‌ ಮಾಡಿ ವಶಕ್ಕೆ ಪಡೆದ ಪೊಲೀಸ್‌

ತೀರ್ಥಹಳ್ಳಿ: ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ (Hit and Run) ಗೂಡ್ಸ್‌ ವಾಹನವನ್ನು ಪೊಲೀಸರು ಚೇಸ್‌ ಮಾಡಿ ಹಿಡಿದಿದ್ದಾರೆ. ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯ 15ನೇ ಮೈಲಿಗಲ್ಲಿನ ಬಳಿ ಅಪಘಾತ ಸಂಭವಿಸಿದೆ. ಬೇಗುವಳ್ಳಿ ಸಮೀಪ ಗೂಡ್ಸ್‌ ವಾಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಹೇಗಾಯ್ತು ಘಟನೆ?

ವಾಹನವೊಂದನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಗೂಡ್ಸ್‌ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ ಸವಾರನಿಗೆ ಗಾಯವಾಗಿದ್ದು, ಸ್ಥಳೀಯರು ಕೂಡಲೆ ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಿದ್ದರು. ಅಪಘಾತದ ಬಳಿಕ ಗೂಡ್ಸ್‌ ವಾಹನ ಚಾಲಕ ವಾಹನ ನಿಲ್ಲಿಸಿದೆ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.

ಚೇಸ್‌ ಮಾಡಿದ ಪೊಲೀಸರು

ಇನ್ನು, ಘಟನೆ ಕುರಿತು ಸ್ಥಳೀಯರು ಮಾಳೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಸಬ್‌ಇನ್ಸ್‌ಪೆಕ್ಟರ್‌ ಕುಮಾರ್‌ ಮತ್ತು ಮುಖ್ಯಪೇದೆ ಅಭಿ ಅವರು ಬೇಗುವಳ್ಳಿ ಸಮೀಪ ಗೂಡ್ಸ್‌ ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Bike-and-Goods-Vehicle-incident-at-Shimoga-Thirthahalli-Road

ಇದನ್ನೂ ಓದಿ » ಶಿವಮೊಗ್ಗದ ನಾಗಸುಬ್ರಹ್ಮಣ್ಯ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ, ಯಾವ್ಯಾವ ದಿನ ಏನೆಲ್ಲ ಕಾರ್ಯಕ್ರಮ ಇರಲಿದೆ?

JNNCE-Admission-Advt-scaled

#news, #Shivamogga, #leopard attack, #human animal conflict, #wildlife, #livestock, #forest department, #cow, #local news, #Karnataka  #Hit And Run

Bike-and-Goods-Vehicle-incident-at-Shimoga-Thirthahalli-Road

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment