ಶಾಲೆ, ಕಾಲೇಜಿಗೆ ರಜೆ ಆದೇಶ ಎಡಿಟ್‌ ಮಾಡಿ ವೈರಲ್‌, ಕಿಡಿಗೇಡಿಗಳ ವಿರುದ್ಧ ತೀರ್ಥಹಳ್ಳಿಯಲ್ಲಿ ಕೇಸ್‌

ತೀರ್ಥಹಳ್ಳಿ: ಶಾಲೆ, ಕಾಲೇಜುಗಳಿಗೆ ತಹಶೀಲ್ದಾರ್‌ ರಜೆ (Holiday) ಘೋಷಣೆ ಮಾಡಿದ್ದ ಆದೇಶ ಪ್ರತಿಯಲ್ಲಿದ್ದ ದಿನಾಂಕ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದರಿಂದ ಆ.18ರಂದು ತೀರ್ಥಹಳ್ಳಿ ತಹಶೀಲ್ದಾರ್‌ ಅವರು ಅಂಗನವಾಡಿಗಳು, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಈ ಆದೇಶ ಪ್ರತಿಯಲ್ಲಿದ್ದ ದಿನಾಂಕ ಎಡಿಟ್‌ ಮಾಡಿ, ಆ.19ರಂದು ರಜೆ ಎಂದು ದಿನಾಂಕ ಬದಲಾಯಿಸಲಾಗಿತ್ತು.

Thirthahalli Police Station

ಇದನ್ನೂ ಓದಿ » ಗೌರಿ – ಗಣೇಶ ಹಬ್ಬ, ಶಿವಮೊಗ್ಗ ಜಿಲ್ಲಾಧಿಕಾರಿಯಿಂದ 8 ಪಾಯಿಂಟ್‌ನ ಪ್ರಮುಖ ಆದೇಶ, ಏನೇನದು?

ಎಡಿಟ್‌ ಮಾಡಿದ ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ರಜೆ ಕುರಿತು ವದಂತಿ ಹಬ್ಬಿಸಿದವರ ವಿರುದ್ಧ ತಾಲೂಕು ಕಚೇರಿ ಸಿಬ್ಬಂದಿ ದೂರು ನೀಡಿದ್ದಾರೆ. ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Holiday orders edited by miscreants 

Leave a Comment