ಆಗುಂಬೆ ಸಮೀಪ ಕಾಂತಾರಾ ಸಿನಿಮಾ ಕಲಾವಿದನಿಗೆ ಹೃದಯಾಘಾತ, ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ತೀರ್ಥಹಳ್ಳಿ: ಕಾಂತಾರಾ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಹ ಕಲಾವಿದ (Artist) ವಿಜು ವಾಡಾನಪ್ಪಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆಗುಂಬೆ ಭಾಗದಲ್ಲಿ ಚಿತ್ರೀಕರಣದಲ್ಲಿ ವಿಜು ಪಾಲ್ಗೊಂಡಿದ್ದರು.

ಆಗುಂಬೆಯ ಗೆಸ್ಟ್‌ ಹೌಸ್‌ ಒಂದರಲ್ಲಿ ಕಲಾವಿದರು ತಂಗಿದ್ದರು. ಕಳೆದ ರಾತ್ರಿ ವಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೆ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಕರೆದೊಯ್ಯಲಾಗುತಿತ್ತು. ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ.

mimicry-artist-Viju-Vanadanappally-no-more

ಕೆಲವು ದಿನದಿಂದ ಈ ಭಾಗದಲ್ಲಿ ಕಾಂತಾರಾ ಚಾಪ್ಟರ್‌ 1 ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ರಿಷಬ್‌ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕೇರಳದ ತ್ರಿಷೂರ್‌ ಜಿಲ್ಲೆಯ ವಿಜು ವಾಡಾನಪ್ಪಲ್ಲಿ ಕೂಡ ಸಿನಿಮಾದಲ್ಲಿ ಸಹ ಕಲಾವಿದನಾಗಿದ್ದರು. ವಿಜು ಮಿಮಿಕ್ರಿ ಕಲಾವಿದರಾಗಿದ್ದರು. ಹಲವು ಸಿನಿಮಾಗಳಲ್ಲಿ ಅಭಿನಯಿಸಿ, ನಿರ್ದೇಶನ ವಿಭಾಗದಲ್ಲಿಯು ಕೆಲಸ ಮಾಡಿದ್ದರು.

https://chat.whatsapp.com/JPJ0lTQsTKf365Fqu6Q7cd

ಇದನ್ನೂ ಓದಿ » ಶಿವಮೊಗ್ಗದಲ್ಲಿ 2 ದಿನ ಕಾರು ಎಕ್ಸ್‌ಚೇಂಜ್‌ ಮೇಳ, ರೈತರು, ಸರ್ಕಾರಿ ನೌಕರರು, ಕಾರ್ಪೊರೇಟ್‌ ಉದ್ಯೋಗಿಗಳಿಗೆ ಭರ್ಜರಿ ಆಫರ್‌

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment