ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳುವಾಗಿದ್ದರೂ ಮನೆಯಲ್ಲಿ ಯಾರಿಗೂ ಗೊತ್ತಾಗಿರಲಿಲ್ಲ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 29 APRIL 2024

THIRTHAHALLI : ಯಾರೂ ಇಲ್ಲದ ವೇಳೆ ಮನೆಯ ಬೀಗ ತೆಗೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ಮನೆಯ ಮುಂಬಾಗಿಲಿನ ಬೀಗ ಕಳವು ಮಾಡಿ, ಯಾರೂ ಇಲ್ಲದ ವೇಳೆ ಕೃತ್ಯ ಎಸಗಲಾಗಿದೆ. ತೀರ್ಥಹಳ್ಳಿ ಸೀಬನಕೆರೆಯ ಸುರುಳಿಬೈಲು ಗ್ರಾಮದ ಹೊನ್ನಾಣಿಯ ತಿಮ್ಮಪ್ಪ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ.

ಸೊಸೈಟಿಗೆ ಹಣ ಕಟ್ಟಲು ಬೀರು ತೆಗೆದಾಗ

ತಿಮ್ಮಪ್ಪ ಅವರು ಫೆಬ್ರವರಿ 19ರಂದು ಸೊಸೈಟಿಗೆ ಹಣ ಕಟ್ಟಲು ಬೀರು ತೆಗೆದಾಗ ನಗದು, ಚಿನ್ನಾಭರಣ ಕಳ್ಳತನ ಆಗಿರುವುದು ಗೊತ್ತಾಗಿದೆ. ಬೀರುವಿನಲ್ಲಿದ್ದ ಉಳಿದ ವಸ್ತುಗಳು ಹಾಗೆಯೇ ಇದ್ದವು. ಆದರೆ ಚಿನ್ನಾಭರಣ, ನಗದು ಮಾತ್ರ ಕಳ್ಳತನವಾಗಿತ್ತು. 40.36 ಲಕ್ಷ ರೂ. ಮೌಲ್ಯ ಚಿನ್ನಾಭರಣ ಮತ್ತು ನಗದು ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮನೆಯ ಬೀಗ ಕದ್ದು ಆಮೇಲೆ ಕೃತ್ಯ

ಫೆ.5ರಂದು ಮಧ್ಯಾಹ್ನ ತಿಮ್ಮಪ್ಪ ಅಂಗಡಿಗೆ ತೆರಳಿದ್ದರು. ಅವರ ಪತ್ನಿ ತೋಟದಲ್ಲಿ ಕಾಳು ಮೆಣಸು ಕೊಯ್ಯುವ ಕೆಲಸ ನೋಡಿ ಬರಲು ಹೋಗಿದ್ದರು. ಮರಳಿ ಬರುವ ಹೊತ್ತಿಗೆ ಮನೆ ಮುಂದೆ ಬೈಕ್‌ ಒಂದು ವೇಗವಾಗಿ ಹೋಗಿತ್ತು. ಆ ದಿನ ಅಡುಗೆ ಮನೆಯಲ್ಲಿಟ್ಟದ್ದ ಪರ್ಸ್‌ ಕಳ್ಳತನವಾಗಿತ್ತು. ಅದರಲ್ಲಿ ಮನೆಯ ಬೀಗ ಇತ್ತು. ಫೆ.18 ರಂದು ಕುಟುಂಬದವರು ಹೆಬ್ರಿಗೆ ತೆರಳಿದ್ದಾಗ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತಡವಾಗಿ ದೂರು ನೀಡುತ್ತಿರುವುದಾಗಿ ತಿಳಿಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಇನ್ನು ಎಂಟೆ ದಿನ ಬಾಕಿ, ಯಾವ್ಯಾವ ಅಭ್ಯರ್ಥಿಗಳು ಯಾವೆಲ್ಲ ಅಜೆಂಡ ಇಟ್ಟುಕೊಂಡು ಪ್ರಚಾರ ನಡೆಸ್ತಿದ್ದಾರೆ?

Leave a Comment