ಶಿವಮೊಗ್ಗ ಲೈವ್.ಕಾಂ | SHIMOGA NEWS | 22 DECEMBER 2020
ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಜಿಲ್ಲೆಯ ವಿವಿಧೆಡೆ ಶತಾಯುಷಿಗಳು, ವೃದ್ಧರು, ವಿಕಲಚೇತನರು ಮತಗಟ್ಟೆಗೆ ಬಂದು, ಮತದಾನ ಮಾಡಿ, ಉಳಿದ ಮತದಾರರಿಗೆ ಮಾದರಿಯಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಆಗುಂಬೆ ಬಳಿ ಶತಾಯುಷಿ ಮತದಾನ
ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಹೊನ್ನೆತಾಳು ಗ್ರಾಮದಲ್ಲಿ 102 ವರ್ಷದ ದುಗ್ಗಮ್ಮ ವೆಂಕಯ್ಯಗೌಡ ಎಂಬುವವರು ಮತದಾನ ಮಾಡಿದರು. ಮನೆಯವರು ಮತ್ತು ಊರಿನವರ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿ, ಹಕ್ಕು ಚಲಾಯಿಸಿದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯ, ಕೆಲವೆಡೆ 5 ಗಂಟೆ ಬಳಿಕವೂ ಮತದಾನ
ಹರಮಘಟ್ಟದಲ್ಲಿ 90 ವರ್ಷದ ಪರಮೇಶ್ವರಪ್ಪ ಅವರು ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಹೊಳೆಹನಸವಾಡಿಯಲ್ಲಿ ವಿಕಲಚೇತನ ಸುಂದರೇಶ್ ಅವರು ಮತ ಚಲಾಯಿಸಿದರು. ತಮ್ಮ ಟ್ರೈಸೈಕಲ್ ಬೈಕ್ನಲ್ಲಿ ಮತಗಟ್ಟೆವರೆಗೆ ಬಂದು ಮತದಾನ ಮಾಡಿದರು.
90 ವರ್ಷದ ಮಲ್ಲಮ್ಮ, 95 ವರ್ಷದ ಗೌರಮ್ಮ ಅವರು ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ, ಉಳಿದ ಮತದಾರರಿಗೆ ಮಾದರಿಯಾದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]