ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
THIRTHAHALLI NEWS, 19 SEPTEMBER 2024 : ಕೆರೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಗುತ್ತಿಗೆದಾರನನ್ನು ಪೊಲೀಸ್ ಸಿಬ್ಬಂದಿ ರಕ್ಷಣೆ (Rescued) ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಕೆರೆಗೆ ಹಾರಿದ್ದ ಗುತ್ತಿಗೆದಾರ
ಅರಳಾಪುರ ಗ್ರಾಮದ ಗುತ್ತಿಗೆದಾರ ರಮೇಶ್ ಎಂಬುವವರು ಯಡೇಹಳ್ಳಿಯ ಕೆರೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಗಳವಾರ ರಾತ್ರಿ 11ಕ್ಕೆ ಪೋಲಿಸ್ ಠಾಣೆಗೆ ಬಂದ ಕರೆಯಿಂದ ತಕ್ಷಣ ಕಾರ್ಯಪ್ರವೃತ್ತರಾದ 112 ವಾಹನದ ಕರ್ತವ್ಯದಲ್ಲಿದ್ದ ರಾಮಪ್ಪ ಹಾಗೂ ಲೋಕೇಶ್ ಕ್ಷಿಪ್ರಗತಿಯಲ್ಲಿ ಯಡೇಹಳ್ಳಿ ಕೆರೆ ಬಳಿಗೆ ತೆರಳಿದ್ದರು.
ಜೀವದ ಹಂಗು ತೊರೆದು ರಕ್ಷಣೆ
ಕೆರೆ ಸಮೀಪ ನಿಂತಿದ್ದ ಕಾರಿನ ಸುಳಿವಿನ ಆಧಾರದಲ್ಲಿ ಕೆರೆ ಪರಿಶೀಲಿಸಿದಾಗ ರಮೇಶ್ ಅವರು ನೀರಿನಲ್ಲಿ ಮುಳುಗುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೆ ಕೆರೆಗೆ ಹಾರಿದ ರಾಮಪ್ಪ ಹಾಗೂ ಲೋಕೇಶ್, ರಮೇಶ್ ಅವರನ್ನು ರಕ್ಷಿಸಿ, ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಗುತ್ತಿಗೆದಾರ ರಮೇಶ್ ಸಾಲದ ಸುಳಿಗೆ ಸಿಲುಕಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದರು. ಜೀವದ ಹಂಗು ತೊರೆದು ಕೆರೆಗೆ ಜಿಗಿದು ರಮೇಶ್ ಅವರನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿಗೆ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ » ಸಾಗರ ತಾಲೂಕಿನಲ್ಲಿ ಏನೇನಾಯ್ತು? – ಇಲ್ಲಿದೆ 5 ಫಟಾಫಟ್ ಸುದ್ದಿ