ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 24 ಸೆಪ್ಟಂಬರ್ 2020
ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆಯಲ್ಲಿ ಸೇತುವೆ ಕುಸಿದಿದ್ದು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರಿಂದ ತೀರ್ಥಹಳ್ಳಿ, ಉಡುಪಿ, ಮಂಗಳೂರು ನಡುವೆ ರಾಷ್ಟ್ರೀಯ ಹೆದ್ದಾರಿ 169ಎ ಸಂಪರ್ಕ ಕಡಿತವಾಗಿದೆ.
https://www.facebook.com/liveshivamogga/videos/330732884677346/?t=0
ನೂರು ವರ್ಷ ಹಳೆ ಸೇತುವೆ
ಜೋರು ಮಳೆ ಮತ್ತು ಭಾರಿ ವಾಹನ ಸಂಚಾರದಿಂದ ಸೇತುವೆ ಶಿಥಿಲವಾಗಿತ್ತು. ನೂರು ವರ್ಷ ಹಳೆಯ ಸೇತುವೆಯನ್ನು ಸಂಪೂರ್ಣ ಇಟ್ಟಿಗೆಯಲ್ಲಿ ನಿರ್ಮಿಸಲಾಗಿತ್ತು. ಸೇತುವೆಯ ಒಂದು ಭಾಗದಲ್ಲಿ ಕುಸಿದಿದೆ. ಆರಂಭದಲ್ಲಿ ಬೈಕು, ಕಾರು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವಘಡ ಸಂಭವಿಸುವ ಆತಂಕವಿದ್ದರಿಂದ ಸೇತವೆ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಉಡುಪಿ, ಮಂಗಳೂರಿಗೆ ಸಂಪರ್ಕ ಕಟ್
ಸೇತುವೆ ಕುಸಿದಿರುವುದರಿಂದ ತೀರ್ಥಹಳ್ಳಿ ತಾಲೂಕಿನಿಂದ ಉಡುಪಿ, ಮಂಗಳೂರು ನಡುವೆ ಸಂಪರ್ಕ ಕಡಿತವಾಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಯಿಂದ ಈ ಮಾರ್ಗವಾಗಿ ಹಲವರು ಮಣಿಪಾಲ ಆಸ್ಪತ್ರೆಗೆ ತೆರಳುತ್ತಿದ್ದರು. ಆದರೆ ಸೇತುವೆ ಕುಸಿತದಿಂದ ಚಿಕಿತ್ಸೆಗೆ ತೆರಳುವವರು ಬದಲಿ ಮಾರ್ಗದಲ್ಲಿ ಸಂಚರಿಸುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ
ಸೇತುವೆ ಶಿಥಿಲವಾಗಿರುವ ಕುರಿತು ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ದುರಸ್ಥಿ ಕಾರ್ಯ ನಡೆದಿರಲಿಲ್ಲ. ಸೇತುವೆ ಮೇಲೆ ಗಿಡಗಳು ಬೆಳೆದಿದ್ದವು. ಇತ್ತೀಚೆಗೆ ಭಾರಿ ಮಳೆ ಸುರಿಯುತ್ತಿದ್ದಾಗ, ಸಮೀಪದ ಮೋರಿ ನೀರಿನ್ನು ಸೇತುವೆ ಮೇಲೆ ಹರಿಯುವಂತೆ ಬಿಡಲಾಗಿತ್ತು. ಇದು ಸೇತುವೆ ಕುಸಿಯಲು ಪ್ರಮುಖ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422