ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 19 MAY 2023
THIRTHAHALLI : ಸಮುದಾಯ ಭವನದಲ್ಲಿ (Community Hall) ನಡೆದ ಜೋಡಿ ಕೊಲೆ ಆರೋಪಿ ರಾಜಣ್ಣ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇಬ್ಬರ ಹತ್ಯೆಗೆ ರಾಜಣ್ಣ ಕಾರಣ ಬಾಯಿ ಬಿಟ್ಟಿದ್ದಾನೆ.

ಇಡ್ಲಿ ವಿಚಾರಕ್ಕೆ ನಡೆದ ಕಿರಿಕ್
ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕುರುವಳ್ಳಿ ವಿಶ್ವಕರ್ಮ ಸಮುದಾಯ ಭವನದಲ್ಲಿ ಟೈಲ್ಸ್ ಕೆಲಸಕ್ಕಾಗಿ 12 ದಿನದ ಹಿಂದೆ ದಾವಣಗೆರೆಯಿಂದ ಐವರು ಕಾರ್ಮಿಕರು ಬಂದಿದ್ದರು. ರಾಜಣ್ಣ ಅಡುಗೆ ಮಾಡುವ ಜವಾಬ್ದಾರಿ ನಿಭಾಯಿಸುತ್ತಿದ್ದ. ಗುರುವಾರ ಬೆಳಗ್ಗೆ ಕಾರ್ಮಿಕರಿಗೆ ಇಡ್ಲಿ ಕೊಟ್ಟಿದ್ದರು. ರಾತ್ರಿ ಊಟಕ್ಕೂ ಅದೆ ಇಡ್ಲಿ ನೀಡಿದ್ದಾರೆ. ಇದೆ ವಿಚಾರವಾಗಿ ರಾಜಣ್ಣ ಜೊತೆಗೆ ಬೀರೇಶ ಮತ್ತು ಮಂಜುನಾಥ್ ಜಗಳವಾಡಿದ್ದರು. ಎಳೆದಾಡಿ ರಾಜಣ್ಣಗೆ ಹೊಡೆದಿದ್ದರು ಎಂದು ಆರೋಪಿಸಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಪಿಕಾಸಿಯಿಂದ ಹೊಡೆದು ಹತ್ಯೆ
ರಾತ್ರಿ ಊಟ ಮುಗಿಸಿ ಎಲ್ಲರು ಮಲಗಿದ್ದರು. ಎಳೆದಾಡಿದ್ದರಿಂದ ಕೋಪಗೊಂಡಿದ್ದ ರಾಜಣ್ಣ ಟೆರೇಸ್ ಮೇಲೆ ಮಲಗಿದ್ದ ಮಂಜುನಾಥ ಮತ್ತು ಕಟ್ಟಡದ (Community Hall) ಒಳಗೆ ಮಲಗಿದ್ದ ಬೀರೇಶನ ತಲೆಗೆ ಪಿಕಾಸಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ – ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಹೊರ ಬಂದ ಕಾಂಗ್ರೆಸ್ ಹಿರಿಯ ನಾಯಕಿಗೆ ಕಾದಿತ್ತು ಶಾಕ್
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
LATEST NEWS
- ಫೇಸ್ಬುಕ್ನಲ್ಲಿ ಮಹಿಳೆಯ ಖಾಸಗಿ ವಿಡಿಯೋ, ಹೊಸನಗರದ ಮಹಿಳೆ, ಬೆಂಗಳೂರಿನ ವ್ಯಕ್ತಿ ಅರೆಸ್ಟ್, ಯಾರಿವರು?

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

About The Editor
ನಿತಿನ್ ಆರ್.ಕೈದೊಟ್ಲು





